Chitradurga News | Nammajana.com | 02-09-2025
ನಮ್ಮಜನ ನ್ಯೂಸ್ ಕಾಂ,ಚಳ್ಳಕೆರೆ: ತಾಲೂಕಿನ(Thieves) ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಹೆಗ್ಗೆರೆ ಹೊಟ್ಟೆಜ್ಜನಕಟ್ಟೆಯಲ್ಲಿ ವಾಸವಿರುವ ರೈತ ಶ್ರೀನಿವಾಸ ಮನೆಗೆ ಬೀಗಹಾಕಿಕೊಂಡು ಜಮೀನಿನ ಕೆಲಸ ನೋಡಿ ವಾಪಾಸ್ ಬರುವಷ್ಟರಲ್ಲಿ ಮನೆಯ ಮೇಲ್ಬಾಗದ ಛಾವಣಿಯಿಂದ ಕಳ್ಳರು ಒಳಪ್ರವೇಶಿಸಿ ಸುಮಾರು 5 ಲಕ್ಷ ಮೌಲ್ಯದ ಮಾಂಗಲ್ಯ ಸರ, ಕಿವಿ ಓಲೆ ಹಾಗೂ ಬಂಗಾರ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಹಾಡುಹಗಲೇ ನಡೆದ ಈ ಘಟನೆ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಜಮೀನಿನಿಂದ ವಾಪಾಸ್ ಬಂದ ರೈತ ಶ್ರೀನಿವಾಸ್ ಬೀರಿನ ಬಾಗಿಲು ಒಡೆದಿರುವುದನ್ನು ನೋಡಿ ಗಾಬರಿಯಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ.
ಇದನ್ನೂ ಓದಿ: CHITRADURGA ಗಾಂಧಿ ವೃತ್ತದ ಬಳಿ ಬಹುಹಂತದ ಪಾರ್ಕಿಂಗ್ ಕಟ್ಟಡಕ್ಕೆ ಡಿಪಿಆರ್
ಅಲ್ಲಿನ ಸಾರ್ವಜನಿಕರು ತಿಳಿಸುವಂತೆ ಮಧ್ಯಾಹ್ನದ ವೇಳೆಯಲ್ಲಿ ಹೆಲೈಟ್ ಧರಿಸಿ ಇಬ್ಬರು ವ್ಯಕ್ತಿಗಳು ಮೋಟಾರ್‌ಬೈಕ್‌ನಲ್ಲಿ ಕೆಲಹೊತ್ತು ಸುತ್ತಾಡಿದ್ದಾರೆ. ಸ್ವಲ್ಪ ಸಮಯದ ನಂತರ ಕಳ್ಳತನ ನಡೆದಿದ್ದು, ಬೈಕ್‌ನಲ್ಲಿ ಬಂದವರೇ ಈ ಕೃತ್ಯವೆಸಗಿರಬಹುದು ಎಂದು ಊಹಿಸಲಾಗಿದೆ.
ಡಿವೈಎಸ್‌ಪಿ ಟಿ.ಬಿ.ರಾಜಣ್ಣ, ಠಾಣಾ(Thieves) ಇನ್ಸ್‌ಪೆಕ್ಟರ್‌ಕೆ. ಕುಮಾರ್‌ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
