Chitradurga News | Nammajana.com | 16-07-2025
ನಮ್ಮಜನ ನ್ಯೂಸ್, ಕಾಂ, ಸಿರಿಗೆರೆ: ಕಾರೊಂದರಲ್ಲಿ ಅವಿತುಕೊಂಡು ದರೋಡೆ(Robbery)ಗೆ ಹೊಂಚು ಹಾಕಿದ್ದ ಗ್ಯಾಂಗ್ ವೊಂದನ್ನು ಸಿರಿಗೆರೆ ಪೊಲೀಸರು ಬಂ ಧಿಸಿದ್ದಾರೆ. ಹಳದಿ ಬೋರ್ಡ್ ಹೊಂದಿದ್ದ ಕಾರಿನಲ್ಲಿ ಅವಿತುಕೊಂಡಿದ್ದ ಐದು ಜನರಲ್ಲಿ ಮೂವರು ಪೊಲೀಸ್ ಬಲೆಗೆ ಬಿದ್ದಿದ್ದು, ಇನ್ನಿಬ್ಬರು ತಪ್ಪಿಸಿಕೊಂಡು ರಸ್ತೆ ಬದಿಯ ತೋಟ ಇಲ್ಲವೇ ಮೆಕ್ಕೆಜೋಳ ಬೆಳೆದಿರುವ ಜಮೀನಿನಲ್ಲಿ ಅವಿತುಕೊಂಡಿರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ವೈಜ್ಞಾನಿಕ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ ಕುರಿತು ತರಬೇತಿ
ಈ ತಂಡ ಕಾರಿನಲ್ಲಿ ಕೆಲವು ಮಾರಕಾಸ್ತ್ರ ಹಾಗೂ ಖಾರದ ಪುಡಿಯನ್ನು ಇಟ್ಟುಕೊಂಡಿತ್ತು ಎಂಬುದನ್ನು ಪೊಲೀಸರು ದೃಢೀಕರಿಸಿದ್ದಾರೆ.
ಹೊಸಕೆರೆ ಹಳ್ಳದ ಸಮೀಪ ಅನುಮಾನಾಸ್ಪದವಾಗಿ ಕಾರು ನಿಲ್ಲಿಸಿಕೊಂಡಿದ್ದ ತಂಡವನ್ನು ಗಮನಿಸಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಂತುಕರು ಬಳಸುತ್ತಿದ್ದ (Robbery) ಕಾರಿನ ಹಿಂಬದಿಯ ನಂಬರ್ ಪ್ಲೇಟ್‌ಗೆ ಸಿಕ್ಚರ್ ಹಾಕಿದ್ದರೆ, ಮುಂಬದಿಯ ಪ್ಲೇಟ್‌ಗೆ ಕೆಸರು ಮೆತ್ತಿ ನಂಬರ್ ಕಾಣಿಸದಂತೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತಂಡದಲ್ಲಿರುವ ವ್ಯಕ್ತಿಗಳು ಶಿವಮೊಗ್ಗ ಕಡೆಯವರೆಂದು ಹೇಳಲಾಗಿದೆ.
ಇದನ್ನೂ ಓದಿ: ಅಗ್ನಿವೀರ್ ನೇಮಕಾತಿ
ತೋಟಗಳಿಗೆ ಹೋಗಿ ಬರುವ ಹುಡುಗಿಯೊಬ್ಬಳನ್ನು ಕರೆದುಕೊಂಡು ಹೋಗಲು ಬಂದಿರುವುದಾಗಿ ತಿಳಿಸಿದ್ದಾರೆ. ಆ ಹುಡುಗಿಯ ವಿವರ ಕೊಡುವಂತೆ ಸ್ಥಳೀಯರು ಗ್ರಾಮಸ್ಥರು ವಿಚಾರಿಸಿದ ಸಂದರ್ಭದಲ್ಲಿ ಒತ್ತಾಯಿಸಿದಾಗ ಭಯಗೊಂಡಿದ್ದಾರೆ.
ಅಡಕೆ ವ್ಯಾಪಾರಸ್ಥರು(Robbery) ಆದಾರಿಯಲ್ಲಿ ಹಣ ಸಾಗಿಸುವ ಸುದ್ದಿಯನ್ನು ಖಚಿತಪಡಿಸಿಕೊಂಡು ದೋಚಲು ಹೊಂಚು ಹಾಕಿದ್ದರು ಎನ್ನಲಾಗುತ್ತಿದೆ. ಗ್ಯಾಂಗ್ ನವರನ್ನು ಬಂಧಿಸಿ ಸಿರಿಗೆರೆ ಪೊಲೀಸ್ ಠಾಣೆಯಲ್ಲಿ ಕೆಲ ಹೊತ್ತು ವಿಚಾರಣೆ ನಡೆಸಲಾಗಿದೆ. ನಂತರ ಹೆಚ್ಚಿನ ವಿಚಾರಣೆಗೆ ಭರಮಸಾಗರ ಠಾಣೆಗೆ ಕರೆದುಕೊಂಡು ಹೋಗಲಾಗಿದೆ.
ಇದನ್ನೂ ಓದಿ: land records: ಡಿಜಿಟಲ್ ರೂಪದಲ್ಲಿ ಭೂದಾಖಲೆ ವಿತರಣೆ | DC ಟಿ.ವೆಂಕಟೇಶ್
ಸಿರಿಗೆರೆ ಪೊಲೀಸ್ ಠಾಣೆಗೆ ಚಿತ್ರದುರ್ಗ ಡಿವೈಎಸ್ಸಿಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
