Chitradurga news|nammajana.com|6-6-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನಾದ್ಯಂತ ರೋಹಿಣಿ ಮಳೆ ನಿರಂತರವಾಗಿ ಮುಂದುವರೆದಿದ್ದು, ಮಳೆಯಿಂದ ಗುಡುಗು, ಸಿಡಿಲ ಜೊತೆಗೆ ಮನೆ (Three house) ಬೆಳೆ ಹಾನಿಯಾದ ಘಟನೆಗಳು ನಡೆದಿವೆ.
ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಒಟ್ಟು ೪೩.೦೮ ಎಂ.ಎಂ ಮಳೆಯಾಗಿದ್ದು, ಇಲ್ಲಿನ ತನಕ ಸುಮಾರು ೮೦೦ ಎಂ.ಎಂ ಮಳೆ ದಾಖಲಾಗಿದೆ. ಚಳ್ಳಕೆರೆ-೨೦.೦೦, ತಳಕು-೧೮.೦೪, ನಾಯಕನಹಟ್ಟಿ-೧.೦೨, ದೇವರಮರಿಕುಂಟೆ-೪.೦೨ ಮಳೆದಾಖಲಾಗಿದೆ.

ಇದೇ ಸಂದರ್ಭದಲ್ಲಿ ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ದೇವಮ್ಮ ಮತ್ತು ನಿಂಗಮ್ಮ ಎಂಬುವವರ ಮನೆಗಳು (Three house) ಮಳೆಯಿಂದ ಕುಸಿದು ಬಿದ್ದು ಒಂದು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಸಿರಿವಾಳ ಓಬಳಾಪುರದ ಜಾಫರ್‌ಸಾಭ್ ಎಂಬುವವರ ಮನೆ ಬಿದ್ದು ಸುಮಾರು ೫೦ ಸಾವಿರ ನಷ್ಟ ಸಂಭವಿಸಿದೆ.
ಇದನ್ನೂ ಓದಿ: Dina Bhavishya kannada: ಇಂದಿನ ದಿನ ಭವಿಷ್ಯ 6-6-2024
ತಾಲ್ಲೂಕಿನ ಚಳ್ಳಕೆರೆ-ನನ್ನಿವಾಳ ಸಂಪರ್ಕ ಕಲ್ಪಿಸುವ ಗರ‍್ಲಕಟ್ಟೆ ಬಳಿ ಮಳೆಯಿಂದ ನದಿಯಂತೆ ಹಳ್ಳದ ನೀರು ರಭಸದಿಂದ ಹರಿದ ಪರಿಣಾಮ ಕೆಲಹೊತ್ತು ವಾಹನ ಸಂಚಾರ, ಜನರು ನೀರಿನ ರಭಸವನ್ನು ನೋಡಿ ಸುರಕ್ಷತೆ ದೃಷ್ಠಿಯಿಂದ ರಸ್ತೆಯಲ್ಲೇ ನಿಂತು ಹರಿಯುವ ನೀರನ್ನು ನೋಡಿದರು.
ನಗರದ ಚಿತ್ರದುರ್ಗ ರಸ್ತೆಯ ಬಿಇಒ ಕಚೇರಿ ಎದುರಿನಲ್ಲಿ ಬಿಎಂಜಿಎಚ್‌ಎಸ್ ಹಾಗೂ ಎಚ್‌ಟಿಟಿ ಶಾಲೆಯ ಮೂಲಕ ಹರಿದ ನೀರು ನದಿಯೋಪಾದಿಯಲ್ಲಿ ರಸ್ತೆಯಲ್ಲೇ ನಿಂತು (Three house) ಸಣ್ಣವ್ಯಾಪಾರಿಗಳಿಗೆ ಸಮಸ್ಯೆ ಉಂಟಾಯಿತು. ಇಲ್ಲಿದ್ದ ಹಣ್ಣಿನ ಅಂಗಡಿ ತುಂಬ ನೀರು ನಿಂತಿತ್ತು. ನಿಂತ ನೀರಿನಲ್ಲೇ ವ್ಯಾಪಾರ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252