Chitradurga news | nammajana.com | 23-8-2024
ಬಜೆಪಿಗೆ ಬಹುಮತ | ಪಕ್ಷೇತರರಿಗೆ ಕಾಂಗ್ರೆಸ್‌ನಿಂದ ಗಾಳ
ನಮ್ಮಜನ.ಕಾಂ, ಮೊಳಕಾಲ್ಮುರು: ಪಟ್ಟಣ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಆಯ್ಕೆಗೆ (Town Panchayat) ಕ್ಷಣಗಣನೆ ಆರಂಭಗೊಂಡಿದೆ. ಆ.23ರ ಶುಕ್ರವಾರ ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್ ಭದ್ರ ಕೋಟೆಯಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರ ಪಡೆಯುವುದು ಬಹುತೇಕ ಖಚಿತವಾಗಿದೆ.
16 ಸದಸ್ಯ ಬಲದ ಪಟ್ಟಣ ಪಂಚಾಯಿತಿ ಯಲ್ಲಿ 8 ಬಿಜೆಪಿ, 6 ಕಾಂಗ್ರೆಸ್, ಇಬ್ಬರು ಪಕ್ಷೇತರರು ಇದ್ದಾರೆ. ಬಿಜೆಪಿಯಿಂದ (Town Panchayat) ಬಂಡಾಯವೆದ್ದು ಸ್ಪರ್ಧಿಸಿ ಗೆದ್ದು ಬೀಗಿದ್ದ ಪಕ್ಷೇತರ ಸದಸ್ಯರು ಆರಂಭದಿಂದಲೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಇಬ್ಬರು ಪಕ್ಷೇತರ ಸದಸ್ಯರೊಟ್ಟಿಗೆ 8 ಬಿಜೆಪಿ ಸದಸ್ಯರು ಸೇರಿ ಒಟ್ಟು 10 ಸದಸ್ಯರನ್ನು ಹೊಂದಿರುವ ಬಿಜೆಪಿ ಸರಳ ಬಹುಮತ ಹೊಂದಿದೆ. ಎರಡನೇ ಬಾರಿಯೂ ಅಧಿ ಕಾರ ಪಡೆಯುವ ಹಾದಿಯೂ ಸುಗಮ ವಾಗಿದೆ.
ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಬಿಜೆಪಿಯಲ್ಲಿ 6 ಮಹಿಳಾ ಸದಸ್ಯರಿದ್ದು ಸಾಲು ಸಾಲಾಗಿ ಪೈಪೋಟಿ (Town Panchayat) ನಡೆಸುತ್ತಿದ್ದಾರೆ.ಲಿಂಗಾಯಿತ
ಮತ್ತು ನೇಕಾರ ಸಮುದಾಯಕ್ಕೆ ನೀಡುವಂತೆ ಒತ್ತಡ ಇದ್ದರೂ ಪರಿಶಿಷ್ಟ ಪಂಗಡ ಸದಸ್ಯರು ಅಂತಿಮವಾಗಲಿದ್ದಾರೆ ಎನ್ನಲಾಗುತ್ತಿದೆ. ಆರಂಭದಿಂದಲೂ ಕಾಂಗ್ರೆಸ್ ಭದ್ರ (Town Panchayat) ಕೋಟೆಯಾಗಿದ್ದ ಪಪಂ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಪ್ರಭಾವದಿಂದ ಬಿಜೆಪಿ ಸರಳ ಬಹುಮತ ಪಡೆದು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಪಟ್ಟಣ ಪಂಚಾಯಿತಿ ಅಧಿಕಾರವನ್ನು ನಮ್ಮದೇ ಪಕ್ಷದ ತೆಕ್ಕಗೆ ತೆಗೆದುಕೊಳ್ಳಬೇಕೆಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಪಕ್ಷೇತರರಿಗೆ ಗಾಳ ಹಾಕಲು ತೆರೆಮರೆಯಲ್ಲಿ ಕಸರತ್ತು ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ.
ಇದನ್ನೂ ಓದಿ: Dina Bhavishya: ಇಂದಿನ ದಿನ ಭವಿಷ್ಯ 23-8-2024
ಕಳೆದ ನಾಲೈದು ದಿನಗಳಿಂದ ಬಿಜೆಪಿಯ 10 ಸದಸ್ಯರು ಪ್ರವಾಸಕ್ಕೆ ತೆರಳಿದ್ದರೆ. ಇತ್ತ ಕಾಂಗ್ರೆಸ್ ನಾಯಕರು ಕೊನೆಯ ಕ್ಷಣದವರೆಗೂ ಪ್ರಯತ್ನಿಸೋಣ ಎಂಬಂತೆ ಗುಟ್ಟಾಗಿ ಮಾತು (Town Panchayat) ಕತೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.