Chitradurga news | nammajana.com | 23-8-2024
ನಮ್ಮಜನ.ಕಾಂ, ಮೊಳಕಾಲ್ಮುರು: ತೀವ್ರ ಕುತೂಹಲ ಕೆರಳಿಸಿದ್ದ ಪಟ್ಟಣ ಪಂಚಾಯಿತಿ ಫಲಿತಾಂಶ ಶುಕ್ರವಾರ ಮಧ್ಯಾಹ್ನ 1 (Town Panchayat) ಗಂಟೆಗೆ ಹೊರ ಬಿದ್ದಿದೆ.
ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 16 ಸದಸ್ಯರುಳ್ಳ ಸ್ಥಳೀಯ ಪಟ್ಟಣ ಪಂಚಾಯಿತಿಗೆ ಬಿಜೆಪಿಯಿಂದ ಲೀಲಾವತಿ ಸಿದ್ದಣ್ಣ (Town Panchayat) ಮತ್ತು ಕಾಂಗ್ರೆಸ್ ನಿಂದ ವಿಜಯಮ್ಮ ಅಧ್ಯಕ್ಷ ಸ್ಥಾನ ಆಯ್ಕೆ ಬಯಸಿ ಉಮೇದುವಾರಿಕೆ ಸಲ್ಲಿಸಿದ್ದರು.
ಇನ್ನು ಪ.ಪಂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿಗೆ ಬಿಜೆಪಿಯಿಂದ ತಿಪ್ಪೇಸ್ವಾಮಿ ಮತ್ತು ಕಾಂಗ್ರೆಸ್ (Town Panchayat) ಪಕ್ಷದಿಂದ ಎಂ.ಅಬ್ದುಲ್ಲ ಉಮೇದುವಾರಿಕೆ ಸಲ್ಲಿಸಿದ್ದರು.
ಬಿಜೆಪಿಯಿಂದ ಸ್ಪರ್ಧೆಸಿದ್ದ ಲೀಲಾವತಿ ಸಿದ್ದಣ್ಣಗೆ ಬಿಜೆಪಿ 8ಸದಸ್ಯರು ಮತ್ತು ಪಕ್ಷೇತರ ಇಬ್ಬರು ಸದಸ್ಯರು ಮತ್ತು ಸಂಸದರ ಒಂದು ಮತ ಸೇರಿದಂತೆ ಒಟ್ಟು 11 ಮತಗಳು ಪಡೆಯುವ ಮೂಲಕ ವಿಜಯಶಾಲಿಯಾದರೆ ಪ್ರತಿಸ್ಪರ್ದಿ ಕಾಂಗ್ರೆಸ್ (Town Panchayat) ಬೆಂಬಲಿತ ಅಭ್ಯರ್ಥಿ ವಿಜಯಮ್ಮ 06ಮತಗಳು ಪಡೆಯುವ ಮೂಲಕ ಸೋಲುಂಡಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಸಿದ್ದ ತಿಪ್ಪೇಸ್ವಾಮಿ 11ಮತಗಳು ಪಡೆಯುವ ಮೂಲಕ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ (Town Panchayat) ಪ್ರತಿಸ್ಪರ್ದಿ ಅಬ್ದುಲ್ಲ 6 ಮತಗಳನ್ನು ಪಡೆದು ಪರಭಾವಗೊಂಡಿದ್ದಾರೆ.
ಪಟ್ಟಣ ಪಂಚಾಯಿತಿ ಬಿಜೆಪಿ ಪಕ್ಷಕ್ಕೆ ಅಧಿಕಾರದ ಗದ್ದುಗೆ ಹಿಡಿಯುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ (Town Panchayat) ಸಂಭ್ರಮಿಸಿದರು.
ಇದನ್ನೂ ಓದಿ: ಬಾಲ್ಯ ವಿವಾಹ | ಬಾಲಕಿಯ ಜೊತೆ ಮದುವೆಗೆ ಸಿದ್ದವಾಗಿದ್ದ ಯುವಕನ ಮೇಲೆ ಕೇಸ್ ದಾಖಲು | Child marriage
ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕ ತಿಪ್ಪೇಸ್ವಾಮಿ, ಪ.ಪಂ ಮಾಜಿ ಅಧ್ಯಕ್ಷರಾದ ಪಿ. ಲಕ್ಷ್ಮಣ್, ರವಿಕುಮಾರ್ ಸದಸ್ಯರಾದ ರೂಪ ವಿನಯ್, ಶುಭ, ಸವಿತಾ ಅರ್ಜುನ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷರಾದ ಮುರುಳಿ, ಬಿಜೆಪಿ ಮಂಡಲಾದ್ಯಕ್ಷರಾದ ಡಾ. ಮಂಜುನಾಥ್, ಬಿಜೆಪಿ ಮುಖಂಡರಾದ ಚಂದ್ರಶೇಖರ್ ಗೌಡ,ಮುರಾರ್ಜಿ ಸೇರಿದಂತೆ ಹಲವರಿದ್ದರು.