Chitradurga news|nammajana.com|25-9-2024
ನಮ್ಮಜನ.ಕಾಂ, ಚಿತ್ರದುರ್ಗ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಇವರ ಪ್ರಾಯೋಜಕತ್ವದಲ್ಲಿ, ಧಾರವಾಡ ಸಿಡಾಕ್ ವತಿಯಿಂದ ಇದೇ (Training) ಸೆಪ್ಟಂಬರ್ ನಾಲ್ಕನೇ ವಾರದಲ್ಲಿ 10 ದಿನಗಳ ಉದ್ಯಮಶೀಲತಾ ತರಬೇತಿ ಶಿಬಿರ ಆಯೋಜಿಸಲಾಗಿದೆ.
18 ರಿಂದ 55 ವರ್ಷ ವಯೋಮಿತಿಯೊಳಗಿನ 10ನೇ ತರಗತಿ ಪಾಸಾದ ಪರಿಶಿಷ್ಟ ಪಂಗಡದ ಉದ್ಯೋಗ ಆಕಾಂಕ್ಷಿಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು.
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಪಾಸ್‌ಪೋರ್ಟ್ ಅಳತೆಯ 2 ಫೋಟೋ ಹಾಗೂ ಆಧಾರ್ (Training) ಕಾರ್ಡ್ನ ಪ್ರತಿಯೊಂದಿಗೆ ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ( ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ನ ಸಿಡಾಕ್ ಜಂಟಿ ನಿರ್ದೇಶಕ ಕಚೇರಿ ಅಥವಾ ತರಬೇತುದಾರ ಪಿ.ವಿಜಯ್ ಕುಮಾರ್ ದೂರವಾಣಿ ಸಂಖ್ಯೆ 7760270058 ಗೆ ಸಂಪರ್ಕಿಸಬಹದು.
ಇದನ್ನೂ ಓದಿ: ದಾವಣಗೆರೆ ವಿವಿ | ಸಮಾಜ ಶಾಸ್ತ್ರ ಅಧ್ಯಾಪಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ | SociologySociology
ತರಬೇತಿ ಕಾರ್ಯಕ್ರಮವು ಉಚಿತವಾಗಿದ್ದು, ತರಬೇತಿ ವೇಳೆಯಲ್ಲಿ ಊಟೋಪಚಾರ ಒದಗಿಸಲಾಗುವುದು. ಆಯ್ಕೆಯಾದ ಶಿಬಿರಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಪ್ರಯಾಣ ಮಾಡಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.