Chitradurga news | nammajana.com | 22-07-2025
ನಮ್ಮಜನ.ಕಾಂ,ಮೊಳಕಾಲ್ಮುರು: ದಾವಣಗೆರೆ ಜಿಲ್ಲೆಯ ಅಡಿಷನಲ್ ಎಸ್ಪಿ ಆಗಿ ನಿವೃತ್ತರಾದ(Retired Additional SP) ವಿಜಯಕುಮಾರ್ ಎಂ ಸಂತೋಷ್ ಅವರಿಗೆ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಸಂಜೆ ಡಿಕೆಆರ್ ಗ್ರೂಪ್ಸ್ ರಾಂಪುರ ಹಾಗೂ ವಿವಿಧ ದಲಿತ ಪರ ಸಂಘಟನೆಗಳು, ನಾನಾ ಸಂಘ ಸಂಸ್ಥೆಗಳು ಸೇರಿದಂತೆ ತಾಲೂಕಿನ ಎಲ್ಲಾ ಸಮಾಜದವರು ನೇತೃತ್ವದಲ್ಲಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳಿಗೆ ಓದಿನಲ್ಲಿ ಆಸಕ್ತಿ | CDPO ನವೀನ್ ಕುಮಾರ್

ಕಾರ್ಯಕ್ರಮದಲ್ಲಿ ಡಿಕೆಆರ್ ಗ್ರೂಪ್ಸ್ ಮಾಲೀಕರಾದ ಎಂ.ಡಿ ಮಂಜುನಾಥ್ ಮಾತನಾಡಿ, ದಾವಣಗೆರೆ ಜಿಲ್ಲೆಯ ಅಡಿಷನಲ್ ಎಸ್ಪಿ ಆಗಿ ನಿವೃತ್ತರಾಗಿರುವ ವಿಜಯ್ ಕುಮಾರ್ ಎಂ ಸಂತೋಷ್ ಅವರು ತಾಲೂಕಿನಲ್ಲಿ ಈ ಹಿಂದೆ ಎರಡು ಬಾರಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಅಂದಿನಿಂದ ಇಂದಿನವರೆಗೂ ಜನಮೆಚ್ಚಿದ ಅಧಿಕಾರಿಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ.ಇದು ಅವರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಅಂದಿನ ದಿನಗಳಲ್ಲಿ ಮೊಳಕಾಲ್ಮುರು ತಾಲೂಕಿನಲ್ಲಿ ಅನ್ಯಾಯ ಮತ್ತು ಅಕ್ರಮಗಳ ವಿರುದ್ಧ ಹೋರಾಡುತ್ತಾ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದ್ದರು.
ಕರ್ತವ್ಯ ನಿಷ್ಠೆ ಜನಪರ(Retired Additional SP) ಕಾಳಜಿಯಿಂದಲೇ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ಗುರುತಿಸಿಕೊಂಡಿದ್ದಾರೆ. ಯಾವುದೇ ಜನಾಂಗ ತಾರತಮ್ಯವಿಲ್ಲದೆ ಪ್ರತಿಯೊಂದು ಜನಾಂಗವನ್ನು ಸಮಾನವಾಗಿ ನೋಡುತ್ತಾ, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪಾದ ಕೊಡದೇ ಪ್ರತಿಯೊಂದು ಜನಾಂಗದವರಲ್ಲಿ ಕಾನೂನು ಅರಿವು ಮೂಡಿಸುವ ಮೂಲಕ ಜನಸ್ನೇಹಿ ಪೊಲೀಸ್ ಆಗಿದ್ದರು ಎಂದು ಹೇಳಿದರು.
ಇದನ್ನೂ ಓದಿ: ಜಿಲ್ಲಾ ಪಂಚಾಯತ್ ಸಿಇಒಗಳಿಗೆ PDO ನಿಯೋಜನೆ ಅಧಿಕಾರ
ಸನ್ಮಾನ ಸ್ವೀಕರಿಸಿದ ನಿವೃತ್ತ ಅಡಿಷನಲ್ ಎಸ್.ಪಿ ವಿಜಯಕುಮಾರ್ ಸಂತೋಷ್ ಎಂ. ಮಾತನಾಡಿ, ನಾನು 30 ವರ್ಷಗಳಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದೇನೆ, ಹಿರಿಯೂರು ಮತ್ತು ಚಿತ್ರದುರ್ಗ ಡಿವೈ ಎಸ್ಪಿ ಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಎರಡು ಬಾರಿ ಮೊಳಕಾಲ್ಮೂರಿನಲ್ಲಿ ಸಿಪಿಐ ಆಗಿ ಕಾರ್ಯ ನಿರ್ವಹಿಸುವಂತಹ ಭಾಗ್ಯ ನನ್ನದಾಗಿತ್ತು. ನಾನು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಾಲೂಕಿನ ಪ್ರತಿಯೊಂದು ವರ್ಗದವರು ಸಹಕಾರ ನೀಡಿದ್ದರು.
ಯಾವುದೇ ಅಧಿಕಾರಿ(Retired Additional SP) ತಾವು ಸೇವೆ ಸಲ್ಲಿಸುವ ಸ್ಥಳಗಳಲ್ಲಿ ದರ್ಪ ದೌರ್ಜನ್ಯ ತೋರದೇ ಜನರ ಮಧ್ಯೆ ಜನಸ್ನೇಹಿಯಂತೆ ಇದ್ದು ಜನರ ಸಮಸ್ಯೆಗಳನ್ನು ಪರಿಹರಿಸಿದಾಗ ಮಾತ್ರ ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯ. ಮೊಳಕಾಲ್ಮುರಿನ ಜನರು ಅಂದಿಗೂ ಇಂದಿಗೂ ತೋರುತ್ತಿರುವ ನಿಮ್ಮ ಪ್ರೀತಿ,ಅಭಿಮಾನಕ್ಕೆ ನಾನು ಚಿರಋಣಿ ಎಂದರು.
ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
ಕಾರ್ಯಕ್ರಮದಲ್ಲಿ ದಾವಣಗೆರೆ ಅಡಿಷನಲ್ ಎಸ್ ಪಿ ಮಂಜುನಾಥ್, ಸಿಪಿಐ ವಸಂತ ವಿ.ಅಸೋದೆ ಬಿಜಿಕೆರೆ ಗ್ರಾಪಂ ಅಧ್ಯಕ್ಷ ಎಸ್ ಜಯಣ್ಣ, ನಿವೃತ್ತ ಮುಖ್ಯ ಶಿಕ್ಷಕ ಸಣ್ಣ ಯಲ್ಲಪ್ಪ, ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಖಾಸಿಂ ಟಿ.ಕೆ ದಲಿತ ಮುಖಂಡರಾದ ಶ್ರೀನಿವಾಸ್ ಮೂರ್ತಿ, ರಾಯಾಪುರ ನಾಗೇಂದ್ರಪ್ಪ, ಯರ್ಜೆನಹಳ್ಳಿ ನಾಗರಾಜ್, ನೆರ್ಲಹಳ್ಳಿ ಹನುಮಂತು, ಮರ್ಲಹಳ್ಳಿ ನಾಗರಾಜ್ ದೊಡ್ಡೋಬಯ್ಯ ಸೇರಿದಂತೆ ಇತರರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252