Chitradurga news|Nammajana.com|2-8-2025
ನಮ್ಮಜನ.ಕಾಂ, ಯುಪಿಐ ಪೇಮೆಂಟ್: ಯೂನಿಫೈಡ್ (UPI) ಪೇಮೆಂಟ್ ಇಂಟರ್ ಫೇಸ್ (ಯುಪಿಐ) ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಜಾರಿಗೆ ಬರಲಿವೆ. ಫೋನ್‌ಪೇ, ಗೂಗಲ್ ಪೇ, (UPI New Rules) ಪೇಟಿಎಂನಂತಹ ಯುಪಿಐ ಆಧಾರಿತ ಆ್ಯಪ್ ಬಳಕೆದಾರರಿಗೆ ಬದಲಾವಣೆ ಅನ್ವಯಿಸಲಿದೆ.
ಹೊಸ ನಿಯಮದ ಪ್ರಕಾರ ನಿತ್ಯ ಬ್ಯಾಲೆನ್ಸ್ ತಿಳಿಯುವುದಕ್ಕೆ ಇನ್ಮುಂದೆ ಮಿತಿ ಇರಲಿದೆ. 2 ಆ್ಯಪ್ ಬಳಸುತ್ತಿದ್ದಲ್ಲಿ ಪ್ರತಿ ಆ್ಯಪ್‌ನಲ್ಲಿ 50ರಂತೆ ಒಟ್ಟು 100 ಸಲ ಬ್ಯಾಲೆನ್ಸ್ ನೋಡಬಹುದು. ಇಷ್ಟೇ ಅಲ್ಲ, ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳನ್ನು ದಿನಕ್ಕೆ 25 ಬಾರಿ ಚೆಕ್ ಮಾಡಬಹುದು. ಇದರಿಂದ ಅನಗತ್ಯ ಕರೆ ಕಡಿಮೆಯಾಗುತ್ತವೆ.

ಯೂನಿಫೈಡ್ ಪೇಮೆಂಟ್ ಇಂಟಫೇಸ್ (ಯುಪಿಐ) ವ (UPI) ವ್ಯವಸ್ಥೆಯಲ್ಲಿ ಆ. 1ರಿಂದ ಹಲವು ಬದಲಾವಣೆಗಳು ಜಾರಿಗೆ ಬರಲಿವೆ. – ಪೋನ್‌ಪೇ, ಗೂಗಲ್ ಪೇ, ಪೇಟಿಎಂ ಮುಂತಾದ ಯುಪಿಐ ಆ್ಯಪ್ ಗಳನ್ನು ದಿನನಿತ್ಯ ಬಳಸುವವರಿಗೆ ಈ ನಿಯಮಗಳು ಮಹತ್ವದ್ದಾಗಿವೆ.
ಬ್ಯಾಲೆನ್ಸ್ ತಿಳಿಯಲು ಮಿತಿ:
ಪ್ರತಿ ಯುಪಿಐ ಆ್ಯಪ್‌ನಲ್ಲಿ ಒಬ್ಬ ಬಳಕೆದಾರ ಈಗ ದಿನಕ್ಕೆ 50ಕ್ಕಿಂತ ಹೆಚ್ಚು ಬಾರಿ ತಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡುವಂತಿಲ್ಲ. ಒಂದು ವೇಳೆ ನೀವು 2 ಆ್ಯಪ್‌ಬಳಸುತ್ತಿದ್ದರೆ, ಪ್ರತಿ ಆ್ಯಪ್‌ನಲ್ಲಿ 50 ಬಾರಿ, ಒಟ್ಟು 100 ಬಾರಿ ಬ್ಯಾಲೆನ್ಸ್ ಚೆಕ್ ಮಾಡಬಹುದು. ಸರ್ವ‌್ರನ ಮೇಲಿನ ಒತ್ತಡ ಕಡಿಮೆ ಮಾಡಲು ಈ ನಿಯಮ ಜಾರಿಗೆ ತರಲಾಗಿದೆ.
ಲಿಂಕ್ಸ್ ಖಾತೆ ಅರಿಯಲು ಮಿತಿ:
ಮೊಬೈಲ್ ಸಂಖ್ಯೆಗೆ ಲಿಂಕ್ 2 ಆಗಿರುವ ಬ್ಯಾಂಕ್ ಖಾತೆ ದಿನಕ್ಕೆ ಕೇವಲ 25 ಬಾರಿ ಚೆಕ್ ಮಾಡಬಹುದು. ಇದರಿಂದ ಅನಗತ್ಯ ಕರೆ ಕಡಿಮೆ ಆಗುತ್ತವೆ.
ಆಟೋಪೇಗೆ ನಿಗದಿತ ಸಮಯ:
ನೆಟ್‌ಫಿಕ್ಸ್, – ಯೂಟ್ಯೂಬ್ ಸಬ್‌ಸ್ಕಿಪ್ಟನ್, ಮ್ಯೂಚುವಲ್ ಫಂಡ್, ಎಲ್ಐಸಿ, ಇಎಂಐ, ಯುಟುಲಿಟಿ ಬಿಲ್, (UPI) ಮುಂತಾದವುಗಳಿಗೆ ಸಂಬಂಧಿಸಿದ ಆಟೋಪೇ ವಹಿವಾಟು ಇನ್ನು ಮುಂದೆ ನಿಗದಿತ ಸಮಯದ ಸ್ಲಾಟ್‌ಗಳಲ್ಲಿ ಮಾತ್ರ ನಡೆಯಲಿದೆ.
ಸಮಯ ನಿಗದಿ ಪ್ರಕಾರ ವ್ಯವಹಾರ (UPI)
ಬೆಳಿಗ್ಗೆ 10ರ ಮೊದಲು, ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ, ರಾತ್ರಿ 9.30ರ ನಂತರ ಮಾತ್ರ ಇನ್ನು ಮುಂದೆ ಆಟೋಪೇ ನಡೆಯಲಿದೆ. ಇದರಿಂದಾಗಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಮತ್ತು ಸಂಜೆ 5ರಿಂದ ರಾತ್ರಿ 9.30ರವರೆಗಿನ ಪೀಕ್ ಅವರ್‌ಗಳಲ್ಲಿ ಸರ್ವರ್ ಮೇಲಿನ ಒತ್ತಡ ಕಡಿಮೆಯಾಗಲಿದೆ.
ವಹಿವಾಟು ಸ್ಟೇಟಸ್ ಚೆಕಿಂಗ್‌ಗೆ ನಿರ್ಬಂಧ:
ವಹಿವಾಟು ವಿಫಲವಾದರೆ, ಒಬ್ಬ ಬಳಕೆದಾರ ದಿನಕ್ಕೆ ಕೇವಲ 3 ಬಾರಿ ಸ್ಟೇಟಸ್ ಚೆಕ್ ಮಾಡಬಹುದು ಮತ್ತು ಪ್ರತಿ ಚೆಕಿಂಗ್‌ನ ನಡುವೆ ಕನಿಷ್ಠ 90 ಸೆಕೆಂಡ್ ಅಂತರ ಇರಬೇಕು. ಇದರಿಂದ ಸರ್ವರ್ ಮೇಲಿನ ಒತ್ತಡ ಕಡಿಮೆ ಆಗುತ್ತದೆ.
ಒಬ್ಬ ಬಳಕೆದಾರನಿಗೆ ಪೇಮೆಂಟ್ ರಿವರ್ಸಲ್‌ಗೆ ಮಿತಿ ಅಪ್ಲೇ;
ಒಬ್ಬ ಬಳಕೆದಾರ 30 ದಿನಗಳಲ್ಲಿ ಕೇವಲ 10 ಬಾರಿ ಪೇಮೆಂಟ್ ರಿವರ್ಸಲ್ (ಚಾರ್ಜ್‌ಬ್ಯಾಕ್) ವಿನಂತಿ ಸಲ್ಲಿಸಬಹುದು. ಒಬ್ಬನೇ ವ್ಯಕ್ತಿ ಅಥವಾ ಸಂಸ್ಥೆಗೆ 5 ಬಾರಿ ಮಾತ್ರ ರಿವರ್ಸಲ್‌ಗೆ ಕೋರಿಕೆ (UPI) ಸಲ್ಲಿಸಬಹುದು.
ರಿಸೀವರ್‌ನ ಬ್ಯಾಂಕ್ ಹೆಸರು ಡಿಸ್‌ಪ್ಲೇ:ಈ ತಿಂಗಳ ಆರಂಭದಿಂದಜಾರಿಯಲ್ಲಿರುವ ನಿಯಮದಂತೆ, ಹಣ ಕಳುಹಿಸುವ ಮೊದಲು ರಿಸೀವರ್‌ನ ಬ್ಯಾಂಕ್‌ನ ಹೆಸರು ಡಿಸ್‌ಪ್ಲೇ ಆಗುತ್ತದೆ. ಇದು ತಪ್ಪು ಖಾತೆಗೆ ಹಣ ಕಳುಹಿಸುವ (New Rules) ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.ಏನೂ ಮಾಡಬೇಕಿಲ್ಲ: ಈ ಬದಲಾವಣೆಗಳು ಆಟೋಮ್ಯಾಟಿಕ್ ಆಗಿ ಯುಪಿಐ ಆ್ಯಪ್‌ಗಳಲ್ಲಿ ಅನುಷ್ಠಾನಕ್ಕೆ ಬರಲಿವೆ. ಇದಕ್ಕಾಗಿ ಬಳಕೆದಾರರು ಏನೂ ಮಾಡಬೇಕಾಗಿಲ್ಲ.
ಇದನ್ನೂ ಓದಿ: FIR ದಾಖಲು ಮಾಡಿದರು ತೆಂಗಿನ ಸಸಿ ನಾಟಿ
ಉಚಿತ ವಹಿವಾಟು ಅಂತ್ಯ?ఆరోబిఐ ಗವರ್ನರ್ ಮುನ್ಸೂಚನೆ
ಡಿಜಿಟಲ್ ವಹಿವಾಟನ್ನು ಯುಪಿಐ ಮೂಲಕ ನಡೆಸುತ್ತಿರುವುದು ಯಾವುದೇ ಸಮಯದಲ್ಲಿ ಅಂತ್ಯಗೊಳ್ಳಬಹುದೆಂದು ಆರ್‌ಬಿಐಗವರ್ನರ್ ಸಂಜಯ್ ಮಲ್ಲೋತ್ರಾ ಹೇಳಿದ್ದಾರೆ. ಈಗ ಯುಪಿಐ ವಹಿವಾಟು ಬಳಕೆದಾರರಿಗೆ ಉಚಿತವಾಗಿದ್ದರೂ ಅದರ ಖರ್ಚನ್ನು ಬ್ಯಾಂಕ್‌ಗಳು, ಇತರ ಪಾಲುದಾರರಿಗೆ (UPI New Rules) ಸರ್ಕಾರವೇ ಭರಿಸುತ್ತಿದೆ. ಯಾವುದೇ ವೆಚ್ಚ ಇರಲಿ, ಅದನ್ನು ಯಾರಾದರೊಬ್ಬರು ಭರಿಸಲೇಬೇಕಲ್ಲವೇ? ಯುಪಿಐ ವ್ಯವಸ್ಥೆ ಆರ್ಥಿಕವಾಗಿ ಕಾರ ಸಾಧ್ಯ ಆಗಿರಬೇಕೆಂದರೆ ಭವಿಷ್ಯದಲ್ಲಿ ಉಚಿತ ವಹಿವಾಟನ್ನು ನಿಲ್ಲಿಸಬೇಕಾಗಬಹುದೆಂದು ಮಲ್ಲೋತ್ರಾ ಹೇಳಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252