Chitradurga news|Nammajana.com|3-8-2025
ನಮ್ಮಜನ.ಕಾಮ, ಚಳ್ಳಕೆರೆ: ಕಳೆದ ತಿಂಗಳು ತಾಲ್ಲೂಕಿನಾದ್ಯಂತ ಉತ್ತಮ ಹದಮಳೆಯಾಗಿದ್ದು ರೈತರು ಕೃಷಿ ಚಟುವಟಿಕೆಗೆ (Urea) ಚಾಲನೆ ನೀಡಿದ್ಧಾರೆ. ಮಳೆಯ ಅಭಾವದಿಂದ ಸ್ವಲ್ಪಭಾಗದ ಜಮೀನನ್ನು ಬಿತ್ತನೆ ಮಾಡಿದ್ದ ರೈತರಿಗೆ ಆಗಸ್ಟ್ ತಿಂಗಳಲ್ಲಿ ಬಂದ ಮಳೆ ಬೂಸ್ಟ್ ನೀಡಿದಂತಾಗಿದೆ.

ತಾಲ್ಲೂಕಿನಾದ್ಯಂತ ಎಲ್ಲಿನೋಡಿದರೂ ಹಸಿರಿನ ವಾತಾವರಣವಿದ್ದು ಚಳ್ಳಕೆರೆ ತಾಲ್ಲೂಕು ಮಲೆನಾಡಿನ ಒಂದುಭಾಗವೆನ್ನಿಸುತ್ತಿದೆ.
ಸಕಾಲದಲ್ಲಿ ಮಳೆಬಾರದೆ ಕಂಗಾಲಾಗಿದ್ದ ರೈತ ದಿಢೀರನೆ ಎರಡೂ ಮಳೆಗೂ ನಿರಂತರ ಸುರಿದ ಪರಿಣಾಮ ರೈತರು ಜಾಗೃತಗೊಂಡು ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ್ಧಾರೆ. ಈಗಾಗಲೇ ಶೇಂಗಾ ಬಿತ್ತನೆ ಮಾಡಿದ ರೈತರು ಕಳೆತಗೆಸಿ, ಎಡೆಕುಂಟೆ ಹೊಡೆಸುವ ಕಾರ್ಯದಲ್ಲಿ ಮಗ್ನರಾಗಿದ್ಧಾರೆ.
ಈ ಮಧ್ಯೆ ರೈತರಿಗೆ ಶೇಂಗಾ ಬೆಳೆ ಉತ್ತಮವಾಗಿ ಬೆಳೆಯಲು ಯೂರಿಯ ಗೊಬ್ಬರ ಅಗತ್ಯವಿದ್ದು ಎಲ್ಲಾ ಗೊಬ್ಬರದ ಸೊಸೈಟಿಗಳ ಮುಂದೆ ರೈತರು ಮುಂಜಾನೆಯೇ ಬಂದು ಸರಥಿ ಸಾಲಿನಲ್ಲಿ ನಿಂತು ಗೊಬ್ಬರ ಖರೀದಿಸಲು ಮುಂದಾಗಿದ್ದಾರೆ.
ಎಲ್ಲಾ ಗೊಬ್ಬರದ ಸೊಸೈಟಿಗಳ ಮುಂದೆ ರೈತರು ಯೂರಿಯ ಗೊಬ್ಬರ ಖರೀದಿಸಲು ದುಂಬಾಲು ಬಿದ್ದಿದ್ದಾರೆ. ಯೂರಿಯ (Urea) ಗೊಬ್ಬರಕ್ಕಾಗಿ ಬೆಳಗಿನಿಂದ ಸಂಜೆ ತನಕ ಕಾದುಕಾದು ಗೊಬ್ಬರ ಪಡೆಯಲು ಹಾತುವರೆಯುತ್ತಿದ್ಧಾರೆ. ಆದರೆ, ಹೆಚ್ಚಿನ ಭಾಗದ ರೈತರಿಗೆ ಯೂರಿಯ ಗೊಬ್ಬರ ಮರಿಚಿಕೆಯಾಗಿದೆ.
ರೈತರು ಎಷ್ಟೇಕಷ್ಟವಾದರೂ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ಧಾರೆ. ಯೂರಿಯ ಗೊಬ್ಬರ ಹಾಕಿದರೆ ಬೆಳೆ ಹುಲುಸಾಗಿ ಬೆಳೆಯುತ್ತದೆ ಎಂಬ ಪ್ರತೀತಿ ಇರುವ ಹಿನ್ನೆಲೆಯಲ್ಲಿ ರೈತರು ಯೂರಿಯ ಖರೀದಿಗೆ ಮುಂದಾಗಿದ್ಧಾರೆ.
ಅನೇಕ ರೈತರು ಪತ್ರಿಕೆಯೊಂದಿಗೆ ಮಾತನಾಡಿ, ಸರ್ಕಾರ ಇಂತಹ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಯೂರಿಯ ಗೊಬ್ಬರ (Urea) ಸರಬರಾಜು ಮಾಡಿ ರೈತರ ನೆರವಿಗೆ ದಾವಿಸಬೇಕು, ಒಂದು ಆಧಾರ್ ಕಾರ್ಡ್ಗೆ ಎರಡು ಪಾಕೇಟ್ ಮಾತ್ರ ನೀಡಲಾಗುತ್ತಿದೆ. ಒಂದು ಪಾಕೇಟ್ ಯೂರಿಯ ೩೦೦ರೂ ನೀಡಬೇಕಿದೆ.
ಒಟ್ಟಿನಲ್ಲಿ ರೈತರು ಯೂರಿಯ ಗೊಬ್ಬರ ಪಡೆಯಲು ಸೊಸೈಟಿಗಳ ಮುಂದೆ ನಿತ್ಯಕಾಯುವ ಸ್ಥಿತಿ ಉಂಟಾಗಿದೆ. ಸಂಬAಧಪಟ್ಟ ಅಧಿಕಾರಿಗಳು ರೈತರಿಗೆ ಸುಲಭವಾಗಿ ಯೂರಿಯ ಗೊಬ್ಬರ ಲಭ್ಯವಾಗುವಂತೆ ಮಾಡಬೇಕಿದೆ.
ಇದನ್ನೂ ಓದಿ: Adike Rate | 03 ಸೆಪ್ಟೆಂಬರ್ 2025 | ಅಡಕೆ ಧಾರಣೆ | ಭೀಮಸಮುದ್ರ ಅಡಿಕೆ ರೇಟ್ ಎಷ್ಟಿದೆ?
ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್ ಮಾತನಾಡಿ, ಕೆಲವು ತಿಂಗಳ ಬಿಡುವಿನ ನಂತರ ದಿಢೀರನೆ ಮಳೆ ಬಂದಿರುವುದು ಎಲ್ಲೆಡೆ ಒಂದೇ ಹಂತದಲ್ಲಿ ಕೃಷಿ ಚಟುವಟಿಕೆಗೆ ರೈತರು ಚಾಲನೆ ನೀಡಿ ಯೂರಿಯ ಖರೀದಿಸಲು ಮುಂದಾಗಿದ್ಧಾರೆ. ಆದರೆ, ಸರ್ಕಾರ ಇದುವರೆಗೂ ತಾಲ್ಲೂಕಿನಾದ್ಯಂತ 4700 ಟನ್ (Urea) ಯೂರಿಯ ಗೊಬ್ಬರವನ್ನು ಸೊಸೈಟಿಗಳ ಮೂಲಕ ವಿತರಣೆ ಮಾಡಲಾಗಿದೆ. ಗೊಬ್ಬರ ಅಭಾವವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.
