
Chitradurga news|nammajana.com|2-1-2025
- ಜಲಾಶಯಕ್ಕೆ 693 ಕ್ಯೂಸೆಕ್ ಒಳಹರಿವು
- ನೀರು ಸಂಗ್ರಹ
- ಪ್ರಸ್ತುತ 129.60 ಅಡಿಗೆ ತಲುಪಿದ ಜಲಾಶಯದ ನೀರಿನ ಮಟ್ಟ.
ವಿಶೇಷ ವರದಿ: ಪಿ.ಟಿ.ಸಿದ್ಧೇಶ್ ಲಕ್ಕಿಹಳ್ಳಿ
ನಮ್ಮಜನ.ಕಾಂ, ಹೊಸದುರ್ಗ: ತಾಲೂಕಿನ ವಿವಿ ಸಾಗರ ಜಲಾಶಯ ಮತ್ತೊಮ್ಮೆ ಭರ್ತಿಯಾಗಿದ್ದು, ಕೋಡಿಬೀಳಲು (V V Sagar Dam) ದಿನಗಣನೆ ಶುರುವಾಗಿದೆ. ಪ್ರಥಮ ಬಾರಿಗೆ 1934 ರಲ್ಲಿ 2ನೇ ಬಾರಿಗೆ 2022 ರಲ್ಲಿ ಭರ್ತಿಯಾಗಿತ್ತು.
ಮತ್ತೆ ಇದೀಗ, ಜಲಾಶಯಕ್ಕೆ ದಾಖಲೆ ಮಟ್ಟದ ನೀರು ಹರಿದು ಬಂದಿದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟ 129.65 ಅಡಿಗೆ ಬಂದು ನಿಂತಿದೆ. ಇನ್ನೂ ಜಲಾಶಯಕ್ಕೆ ಅರ್ಧ ಅಡಿ ನೀರು ಬಂದರೆ, ಇನ್ನೊಂದು ವಾರದೊಳಗಾಗಿ 3ನೇ ಬಾರಿಗೆ (V V Sagar Dam) ಕೋಡಿ ಬಿದ್ದು, ಐತಿಹಾಸಿಕ ದಾಖಲೆ ನಿರ್ಮಾಣವಾಗಲಿದೆ.
ಜಲಾಶಯ ಕೋಡಿ ಬಿದ್ದಲ್ಲಿ ಒಂದೆಡೆ ರೈತರ ಮುಖದಲ್ಲಿ ಸಂತಸ ಮೂಡಿದರೆ, ಜಲಾಶಯದ ಹಿನ್ನೀರಿನ ಹೊಸದುರ್ಗ ತಾಲೂಕಿನ ರೈತರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.
ಎರಡು ವರ್ಷದ ಹಿಂದೆ (2022) ಡ್ಯಾಂ ಕೋಡಿ ಬಿದ್ದಾಗ ಹಿನ್ನೀರಿನ ಕೆಲ ಗ್ರಾಮಗಳಲ್ಲಿ ತೇವಾಂಶ ಹೆಚ್ಚಾಗಿ ಮನೆಗಳು ಬಿರುಕು ಬಿಟ್ಟಿದ್ದವು. ಇನ್ನೂ ಮಾಡದಕೆರೆ ಹೋಬಳಿಯ ಲಕ್ಕಿಹಳ್ಳಿ, ಮಾದಿಹಳ್ಳಿ, ಅಯ್ಯನಹಳ್ಳಿ, ಬೇವಿನಹಳ್ಳಿ, ಅಂಚೀಬಾರಿಹಟ್ಟಿ, ನಾಗಯ್ಯನಹಟ್ಟಿ, ತಿಮ್ಮಯ್ಯನಹಟ್ಟಿ, (V V Sagar Dam) ಕೆರೆಕೋಡಿಹಟ್ಟಿ, ಶೀರನಕಟ್ಟೆ, ಕೋಡಿಹಳ್ಳಿಹಟ್ಟಿ, ಪೂಜಾರಹಟ್ಟಿ, ಮಾಳಿಗೆಹಟ್ಟಿ, ಎಂ.ಮಲ್ಲಾಪುರ, ಮತ್ತೊಡು ಹೋಬಳಿಯ ನಾಗತಿಹಳ್ಳಿ, ತಿಪ್ಪೇನಹಳ್ಳಿ, ಅರೇಹಳ್ಳಿ, ಹೊಸೂರು ಭೋವಿಹಟ್ಟಿ, ಹುಣಸೇಕಟ್ಟೆ ಮತ್ತು ಇಂಡೇ ದೇವರಹಟ್ಟಿ ಸೇರಿದಂತೆ ಇನ್ನಿತರ ಗ್ರಾಮಗಳ ಜನರ ರೈತರ ಜಮೀನುಗಳು ಮುಳುಗಿದ್ದವು. ಜಲಾಶಯದಲ್ಲಿ ನೀರು ಮತ್ತಷ್ಟು ಹೆಚ್ಚಾದರೆ, ಈ ಬಾರಿಯೂ ಜಮೀನುಗಳು ಮುಳುಗಬಹುದೆಂಬ ಆತಂಕದಲ್ಲಿದ್ದಾರೆ.
ಜಲಾಶಯದಲ್ಲಿ 130 ಅಡಿ ನೀರು ಸಂಗ್ರಹವಾದರೆ, ಜಲಾಶಯದ ಹಿನ್ನೀರಿನ (ಹೊಸದುರ್ಗ ತಾಲೂಕಿನ) ಅಷ್ಟರ ಮಟ್ಟಿಗೆ ಸಮಸ್ಯೆ ಏನು ಆಗುವುದಿಲ್ಲ. ಆದರೆ, 130 ಅಡಿಗಿಂತ ಹೆಚ್ಚು ದಾಟಿದರೆ, ಜಮೀನುಗಳು ಮುಳುಗಡೆಯಾಗುವುದಲ್ಲದೆ, ಗ್ರಾಮಗಳು ಕೂಡ ಮುಳುಗುವ ಭೀತಿ ಎದುರಾಗುತ್ತದೆ. ಸರ್ಕಾರ ಗಡಿ ಗುರುತು ಮಾಡಿರುವ ಹಿನ್ನೀರು ಪ್ರದೇಶವನ್ನು ದಾಟಿ, ಖಾಸಗಿ ಜಮೀನುಗಳಿಗೆ ನೀರು ಬಂದಿತ್ತು. ಇಂತಹ (V V Sagar Dam) ಪರಿಸ್ಥಿತಿಯನ್ನು 2022 ರಲ್ಲಿ ಅನುಭವಿಸಿದ್ದೇವೆ.
ಜಲಾಶಯದಲ್ಲಿ ನೀರು ಹೆಚ್ಚಾಗುವ ಸಾಧ್ಯತೆಯಿದ್ದು, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಹಿಸಬೇಕೆಂದು ಲಕ್ಕಿಹಳ್ಳಿ ಗ್ರಾಮದ ಯುವಕ ಚಿಕ್ಕ ಕರಿಯಪ್ಪ ಒತ್ತಾಯಿಸಿದ್ದಾರೆ.
ಬಾಕ್ಸ್
ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ 129 ಅಡಿಗೆ ತಲುಪಿದ್ದು, ಮತ್ತೊಮ್ಮೆ ಕೋಡಿ ಬೀಳುವ ಸಂದರ್ಭ ಸಮೀಪಿಸಿದೆ. ಈಗಾಗಲೇ, ಜಲಾಶಯದ ಹಿನ್ನೀರಿನ ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು (V V Sagar Dam) ಕೇಳಲಾಗಿದೆ. ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಿಕೊಂಡಿದ್ದೇವೆ. ಡ್ಯಾಂ ನಲ್ಲಿ ದಾಖಲೆ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ನೀರಿನತ್ತ ಹೋಗದಂತೆ ಎಚ್ಚರವಹಿಸಬೇಕು.
ತಿರುಪತಿ ಪಾಟೀಲ್.
ತಹಶೀಲ್ದಾರರು, ಹೊಸದುರ್ಗ
