
Chitradurga news |nammajana.com|18-9-2024
ನಮ್ಮಜನ.ಕಾಂ, ಹೊಸದುರ್ಗ: ಕೂಲಿ ಕೆಲಸಕ್ಕೆಂದು ಹೋಗಿದ್ದ ವ್ಯಕ್ತಿಯೋರ್ವ ವಿವಿ. ಸಾಗರ ಜಲಾಶಯದಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಶ್ರೀರಾಂಪುರ ಪೋಲಿಸ್ ಠಾಣಾ ವ್ಯಾಪ್ತಿಯ (V V Sagara) ಇಟ್ಟಿಗೆ ಹಳ್ಳಿಯ ಬಳಿ ಮಂಗಳವಾರ ನಡೆದಿದೆ.
ನಾಗತಿಹಳ್ಳಿ ಗ್ರಾಮದ ರಂಗಸ್ವಾಮಿ (25) ಮೃತ ದುರ್ದೈವಿ. ಇಟ್ಟಿಗೆಹಳ್ಳಿಯ ಕೋಳಿ ಫಾರಂ ಬಳಿಯ ಜಮೀನಿನಲ್ಲಿ ಶೇಂಗಾ ಬೆಳೆಯಲ್ಲಿ ಕಳೆ ಕೀಳಲೆಂದು ಹೋಗಿದ್ದ. ಬಾಯಾರಿಕೆಯಿಂದ (V V Sagara) ಸಮೀಪದಲ್ಲೆ ಇದ್ದ ವಿವಿ ಸಾಗರದ ಡ್ಯಾಂನ ಬಳಿ ತೆರಳಿದ್ದಾನೆ.

ಇದನ್ನೂ ಓದಿ: ಸಿಡಿದ KSRTC ಬಸ್ ಟೈರ್, ಹೊಲಕ್ಕೆ ನುಗ್ಗಿದ ಬಸ್, ಮುಂದೆ ಆಗಿದ್ದೇನು ನೋಡಿ? Bus Accident
ನೀರಿನಲ್ಲಿ ಇಳಿಯುತ್ತಿದ್ದಂತೆ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ. ಈ (V V Sagara) ಸಂಬಂಧ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
