Chitradurga news|nammajana.com|22-6-2024
ನಮ್ಮಜನ.ಕಾಂ, ಹೊಸದುರ್ಗ: ನಾವು ದೀನ ದಲಿತರ ಪರಿಶಿಷ್ಟ ಜಾತಿ ಪಂಗಡದವರ ಉದ್ಧಾರಕ್ಕೆ ಇದ್ದೇವೆ ಎಂದು ಹೇಳಿಕೆ ನೀಡುವ ಕಾಂಗ್ರೆಸ್ ಪಕ್ಷದ ಶಾಸಕ ಸಚಿವರೇ, 187 ಕೋಟಿ ಸಂಶಯಾಸ್ಪದವಾಗಿ ವರ್ಗಾವಣೆಯಾಗಿರುವ ಈ ಹಣ ಎಸ್ ಟಿ (Valmiki Corporation) ಸಮುದಾಯದ ಬಡವರ ಬದುಕು ಕಟ್ಟಿಕೊಳ್ಳಬೇಕಾದವರ ಹಣ ನಿಮ್ಮ ರಾಜಕೀಯ ಅಭಿವೃದ್ಧಿಗಾಗಿ ಬಳಕೆಯಾಗಿದೆಯಲ್ಲ, ನೀವು ಒಮ್ಮೆ ಪ್ರಶ್ನೆ ಮಾಡಬಾರದೇ ಎಂದು ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಕಿಡಿ ಕಾರಿದರು.
ಹೊಸದುರ್ಗದ ಪ್ರವಾಸಿ ಮಂದಿರದಲ್ಲಿ ನಡೆದ ಬಿಜೆಪಿ ಎಸ್ ಟಿ ಮೋರ್ಚಾ ಮಂಡಲ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಅನ್ಯಾಯಕ್ಕೆ ಒಳಗಾಗಿರುವ ವಾಲ್ಮೀಕಿ (Valmiki Corporation) ಸಮುದಾಯಕ್ಕೆ ನ್ಯಾಯ ಒದಗಿಸುವವರು ಯಾರು ? ಸರ್ಕಾರದ ಹಸ್ತಕ್ಷೇಪವಿಲ್ಲದೆ ಇಷ್ಟೊಂದು ದೊಡ್ಡ ಆರ್ಥಿಕ ವ್ಯವಹಾರ ನಡೆಯಲು ಹೇಗೆ ಸಾಧ್ಯ, ಚುನಾವಣೆಯ ನೀತಿ ಸಂಹಿತೆಯ ಅವಧಿಯಲ್ಲಿ ಇಷ್ಟೊಂದು ಹಣ ವರ್ಗಾವಣೆ ಆಗಲಿ ಹೇಗೆ ಸಾಧ್ಯ ಇವರು ಯಾವ ಅನುದಾನಕ್ಕಾಗಿ ಬಳಸಿದ್ದಾರೆ ಎಂದು ತಿಳಿಸಲಿ, ತೆಲಂಗಾಣ ಆಂಧ್ರ ಪ್ರದೇಶದ ಚುನಾವಣೆಗೆ ಈ ಹಣ ಬೇಕಿತ್ತಾ, ಈ ಪ್ರಶ್ನೆಗೆ ಹಣಕಾಸು ಇಲಾಖೆಯ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರಿಸಬೇಕು.
ಇದನ್ನೂ ಓದಿ: Darshan Case: ರೇಣುಕಾಸ್ವಾಮಿ ಕೇಸ್ | ಡಿ.ಗ್ಯಾಂಗ್ ಎಡೆಮುರಿಕಟ್ಟಿದ ಖಡಕ್ ಪೊಲೀಸ್ ಅಧಿಕಾರಿಗಳು, ಕೇಸ್ ಭೇದಿಸಿದ್ದು ಹೇಗೆ?
ಬರುವ 28ರಂದು ಚಿತ್ರದುರ್ಗ ಜಿಲ್ಲಾ ಧಿಕಾರಿಗಳ ಕಚೇರಿಯ ಎದುರು ವಾಲ್ಮೀಕಿ ಸಮುದಾಯದ ಬೃಹತ್ ಪ್ರತಿಭಟನೆ ನಡೆಯಲಿದ್ದು ನಮ್ಮ ಸಮುದಾಯದ ಹಣ ದುರ್ಬಳಕೆಯಾಗಿದ್ದು ಪಕ್ಷಾತೀತವಾಗಿ ವಾಲ್ಮೀಕಿ ಸಮಾಜದ ಬಂಧುಗಳು (Valmiki Corporation) ಹಾಗೂ ಬಿಜೆಪಿಯ ಎಲ್ಲ ಸ್ತರದ ಕಾರ್ಯಕರ್ತರು ಈ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಸುಮಾರು 25 ಸಾವಿರ ಕೋಟಿ ಹಣವನ್ನು ನೀವು ಬಿಟ್ಟಿ ಭಾಗ್ಯಗಳಿಗೆ ಕೊಡುತ್ತಿದ್ದೀರ, ವರ್ಗಾವಣೆಯ 187 ಕೋಟಿ ಹಣ ಹಣಕಾಸು ಇಲಾಖೆಯ ಅಡಿಯಲ್ಲಿಯೇ ನಡೆದಿದೆ. ಮುಖ್ಯಮಂತ್ರಿ ಅವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದರು.
ಕೆಟಿಕೆ ಮಾತು.(Valmiki Corporation)
ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಮಾಡುತ್ತಿರುವ ಘನ ಘೋರ ಅನ್ಯಾಯ ಇದು,ಬಡತನದ ಅಂಚಿನಲ್ಲಿ ಬದುಕುತ್ತಿರುವ ವಾಲ್ಮೀಕಿ ಸಮುದಾಯದ ಬಡ ಮಕ್ಕಳ ವಿದ್ಯಾರ್ಥಿ ವೇತನ, ವಸತಿ ಶಾಲೆಗಳ,ವಾಹನ ಸೌಲಭ್ಯಗಳ , ಕೊಳಬೇಬಾವಿಗಳ, ಹಾಗೂ ಮನೆಗಳ ನಿರ್ಮಾಣಕ್ಕೆ ತೆಗೆದಿಟ್ಟ ಮೀಸಲು ಹಣ ಚುನಾವಣೆ ನೀತಿ ಸಮಿತಿ ಅವಧಿಯಲ್ಲಿಯೇ ವರ್ಗಾವಣೆಯಾಗಿರುವುದು ಈ ಹಗರಣಕ್ಕೆ ಎಡೆ ಮಾಡಿಕೊಟ್ಟಿದೆ ತಕ್ಷಣವೇ ಈ ಹಗರಣ ಬಯಲಿಗೆಳೆಯಬೇಕಿದೆ.
ಕೆ ,ಟಿ ,ಕುಮಾರಸ್ವಾಮಿ,
ಬಿಜೆಪಿ ಮುಖಂಡ
ಕಾರ್ಯದರ್ಶಿ ರಾಮದಾಸ್ ಮಾತು (Valmiki Corporation)
ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ,ಕೆಎಸ್ ಕಲ್ಮಠ,ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಶಿವಣ್ಣ, ರಾಜ್ಯ ಎಸ್ ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಕವನ, ಪ್ರಶಾಂತ್, ವೀರಭದ್ರಪ್ಪ, ದೇವರಾಜ್ ಕಡವಗೆರೆ, ಮಾಜಿ ಜಿ ಪಂ ಸದಸ್ಯ ರಮೇಶ್ , ಇಂದು ಅಶೋಕ್, ಅನುಸೂಯಮ್ಮ, ಪಾರ್ವತಮ್ಮ, ನಾಗರಾಜ್, ಮಂಜುನಾಥ್, ಶ್ರೀಧರ್, ಹಾಗು ಕಾರ್ಯಕರ್ತರು ಹಾಜರಿದ್ದರು.