Chitradurga news|nammajana.com|6-12-2024
ನಮ್ಮಜನ.ಕಾಂ, ಚಿತ್ರದುರ್ಗ: ಜನಾಂಗದ ಮತ್ತು ಮಠದ ಪರಂಪರೆಯ ಹೆಸರಿನಲ್ಲಿ ನಡೆಯುವಂತಹ ಜಾತ್ರೆಗಳು (Valmiki fair) ಸಮುದಾಯವನ್ನು ಜಾಗೃತಿಗೊಳಿಸಿ ಇದರಿಂದ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗೆ ಕೊಂಡಯುತ್ತವೆ ಎಂದು ನಿಕಟಪೂರ್ವ ಕೆಎಎಸ್ ಅಧಿಕಾರಿ ರಘುಮೂರ್ತಿ ಹೇಳಿದರು.
ಅವರು ತಳುಕು ಗ್ರಾಮದ ವಾಲ್ಮೀಕಿ ಸಮುದಾಯ ಭವನದ ಆವರಣದಲ್ಲಿ 2025ರ ಫೆಬ್ರವರಿಯಲ್ಲಿ ನಡೆಯುವಂತಹ (Valmiki fair) ವಾಲ್ಮೀಕಿ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ವಾಲ್ಮೀಕಿ ಬೃಹನ್ ಮಠದ ಪ್ರಸನ್ನಾನಂದ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಇಡೀ ಸಮಾಜವನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪರಿವರ್ತಿಸುವ ದೃಷ್ಟಿಯಿಂದ ಪೂಜ್ಯ ಸ್ವಾಮೀಜಿಯವರು ನಿರಂತ ಪ್ರವಾಸ ಕೈಗೊಳ್ಳುವ ಮೂಲಕ ಸಮಾಜವನ್ನು ಜಾಗೃತಿಗೊಳಿಸುತ್ತಿದ್ದಾರೆ.
ಈ ಜಾಗೃತಿ ನಾಯಕ ಜನಾಂಗದ ಪರಂಪರೆ ಮತ್ತು ಇತಿಹಾಸವನ್ನು ರಕ್ತರಾತ್ರಿ ಕಂಬನಿ ಕೊಯ್ಲು ಮತ್ತು ದುರ್ಗಾಸ್ತಮಾನ ಕಾದಂಬರಿಗಳ ಮೂಲಕ ಶೌರ್ಯ ಸಾಹಸ ರಾಷ್ಟ್ರಪ್ರೇಮ ಮತ್ತು ಸ್ವಾಭಿಮಾನವನ್ನು ಇಡೀ ವಿಶ್ವಕ್ಕೆ ತಿಳಿಸಿದಂತ ತಾಲೂಕಿನ ತಾರಾ ಸು ರವರ ನೆಲೆ ನಾಡಲ್ಲಿ ಇವತ್ತು ಪೂಜ್ಯ ಸ್ವಾಮೀಜಿಯವರು ಆಗಮಿಸಿ ಜಾತ್ರಾ ಮಹೋತ್ಸವದ ಔಚಿತ್ಯವನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.
ಈ ಭಾಗದ ಹೆಚ್ಚು ಹೆಚ್ಚು ಜನ ಬಂಧುಗಳು ಈ ಜಾತ್ರೆಗೆ (Valmiki fair) ಪಾಲ್ಗೊಳ್ಳಬೇಕು ಹಾಗೂ ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನ ಇರುವ ಈ ಸಮುದಾಯ ಇನ್ನೂ ಹೆಚ್ಚಿನ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಬೇಕೆಂದು ಕರೆ ನೀಡಿದರು
ದಿವ್ಯ ಸಾನಿಧ್ಯ ವಹಿಸಿದ್ದ ಪ್ರಸನ್ನ ನಂದಪುರ ಸ್ವಾಮೀಜಿ ಮಾತನಾಡಿ ಸಮುದಾಯದ ಜಾತ್ರೆಗಳು ಸಾಮಾಜಿಕ ಬದಲಾವಣೆಗೆ ಮುಖ್ಯ ಪಾತ್ರ ವಹಿಸುತ್ತವೆ.
ಇವತ್ತು ಅಂಬೇಡ್ಕರ್ ಅವರ ಪರಿನಿರ್ಮಾಣ ದಿನ ಸಾಮಾಜಿಕ ಬದಲಾವಣೆಗೆ ಡಾ. ಬಿಆರ್ ಅಂಬೇಡ್ಕರ್ ಅವರು ಕನಸು ಕಂಡಂತವರು ಅದರಂತೆ ಈ ಭಾಗದಲ್ಲಿರುವಂತಹ ಈ ಸಮಾಜದ ಜನ ಹೆಚ್ಚೆಚ್ಚು ಪ್ರಜ್ಞಾವಂತರು ಇರುವುದರಿಂದ ಇನ್ನು ಹೆಚ್ಚು ಜಾಗೃತಗೊಳ್ಳುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ: ಬ್ಯಾಂಕ್‌ನಿಂದ 29.5 ಲಕ್ಷ ರೂ ವಂಚನೆ | Bank fraud
ಆದ್ದರಿಂದ ಈ ವರ್ಷ ನಡೆಯುವಂತಹ ಜಾತ್ರೆಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗಿಯಾಗಿ ಜನಾಂಗದ ಅಭಿವೃದ್ಧಿಗೆ ಮುನ್ನುಡಿ ಬರೆಯೋಣವೆಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಮಹಾಂತೇಶ ಓಬಯ್ಯ ನವೀನ ತಿಪ್ಪಮ್ಮ ಪಾಲಯ್ಯ ಮುಂತಾದ ಮುಖಂಡರು ಉಪಸ್ಥಿತರಿದ್ದರು