Chitradurga news |nammajana.com |8-12-2024
ನಮ್ಮಜನ.ಕಾಂ, ಚಳ್ಳಕೆರೆ: ಪ್ರತಿವರ್ಷದಂತೆ ಈ ವರ್ಷವೂ ದಾವಣಗೆರೆ ಜಿಲ್ಲೆ ರಾಜನಹಳ್ಳಿಯಲ್ಲಿ ಮಹರ್ಷಿ ಶ್ರೀವಾಲ್ಮೀಕಿ ಪೀಠದಲ್ಲಿ ಏಳನೇ ವರ್ಷದ ವಾಲ್ಮೀಕಿ ಜಾತ್ರೆಯನ್ನು ಸಂಭ್ರಮ, ಸಡಗರಗಳಿಂದ ನಡೆಸಲು ನಿರ್ಧರಿಸಿದ್ದು, ಸಮುದಾಯದ (Valmiki Jatre) ಮುಖಂಡರು ಜಾತ್ರೆಯ ಯಶಸ್ವಿಗೆ ಕೈಜೋಡಿಸುವಂತೆ ಪ್ರಸನ್ನಾನಂದಪುರಿಸ್ವಾಮೀಜಿ ತಿಳಿಸಿದರು.
ಅವರು, ನಗರದ ವಾಲ್ಮೀಕಿ ಕಲ್ಯಾಣಮಂಟಪದಲ್ಲಿ ೨೦೨೫ರ ಫೆ.೮ ಮತ್ತು ೯ ಎರಡು ದಿನಗಳ ಕಾಲ ನಡೆಯುವ ವಾಲ್ಮೀಕಿಯ ಜಾತ್ರೆಯ ಬಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕರ್ನಾಟಕವೂ ಸೇರಿದಂತೆ ನಾಡಿನ ವಿವಿಧಡೆಗಳಿಂದ ಭಕ್ತರು ಸಾಗರೋಪಾಧಿಯಲ್ಲಿ ಶ್ರೀವಾಲ್ಮೀಕಿ ಜಾತ್ರೆಗೆ ಆಗಮಿಸುತ್ತಾರೆ.

ಬರುವ ಎಲ್ಲಾ ಭಕ್ತರಿಗೆ ಸೂಕ್ತ ಸೌಲಭ್ಯಗಳನ್ನು ಮಠದ ವತಿಯಿಂದ ಭಕ್ತರ ಸಹಕಾರದಿಂದ ನೀಡಬೇಕಾಗುತ್ತದೆ. ಈಗಾಗಲೇ ಜಾತ್ರೆ ಹಿನ್ನೆಲೆಯಲ್ಲಿ ರಾಜ್ಯದ ವಿವಿದೆಡೆ (Valmiki Jatre) ಪ್ರವಾಸಕೈಗೊಂಡು ವಾಲ್ಮೀಕಿ ಸಮುದಾಯವನ್ನು ಜಾಗೃತಗೊಳಿಸಲಾಗಿದೆ ಎಂದರು.
ಸಮುದಾಯದ ಮುಖಂಡ ಟಿ.ತಿಪ್ಫೇಸ್ವಾಮಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪೂಜ್ಯ ಶ್ರೀಗಳಿಂದ ಪ್ರತಿವರ್ಷವೂ ಜಾತ್ರೆ ಅದ್ದೂರಿಯಾಗಿ ನಡೆಯುತ್ತಾ ಬಂದಿದೆ. ಜಾತ್ರೆಯ ಯಶಸ್ವಿಗೆ ಶಾಸಕರು ಹಲವಾರು ಸೂಚನೆ ನೀಡಿದ್ದಾರೆ. ಜಾತ್ರೆಯನ್ನು ಸಂಭ್ರಮದಿಂದ ನಡೆಸಲು ನಮ್ಮ ಸಹಕಾರ ಎಂದಿನಂತೆ ಮುಂದುವರೆಯುತ್ತದೆ ಎಂದರು.
ಜಾತ್ರಾ ಸಮಿತಿ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾದ ವಿಶ್ವಭಾರತಿಪ್ರೌಢಶಾಲಾ ಮುಖ್ಯೋಪಾಧ್ಯಾಯ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ, ಪ್ರತಿವರ್ಷವೂ ಈ ಜಾತ್ರೆಯನ್ನು ನಮ್ಮ ಸಮುದಾಯದ ಸಂಘಟನೆಯ ಜೊತೆಗೆ ಮಹರ್ಷಿ ವಾಲ್ಮೀಕಿಯವರ ವಿಚಾರಧಾರೆಗಳನ್ನು ಹಂಚಿಕೊಳ್ಳಲು ಕಾರ್ಯಕ್ರಮ ಆಯೋಜಿಸಲಾಗುತ್ತದೆ. ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗುವುದು, ತಾಲ್ಲೂಕಿನಾದ್ಯಂತ ತಂಡರಚಿಸಿ ಪ್ರವಾಸಕೈಗೊಳ್ಳಲಾಗುವುದು ಎಂದರು.
ಮುಖಂಡರಾದ ಬಾಳೆಮಂಡಿರಾಮದಾಸ್, ಕೆ.ಟಿ.ಕುಮಾರಸ್ವಾಮಿ, ಚನ್ನಂಗಿರಗಸ್ವಾಮಿ, ದುಗ್ಗಾವರತಿಪ್ಪೇಸ್ವಾಮಿ, ಪಿ.ತಿಪ್ಪೇಸ್ವಾಮಿ, ಡಾ.ಡಿ.ಎನ್.ಮಂಜುನಾಥ, ರಘುನಾಥ, ಸಿ.ಟಿ.ವೀರೇಶ್, ಎಂ.ಚೇತನ್ಕುಮಾರ್, ಬಿ.ತಿಪ್ಪೇಸ್ವಾಮಿ, ಸುರೇಶ್, ಬೋರಯ್ಯ, ಬಡಗಿಪಾಪಣ್ಣ, ಶಿವಕುಮಾರ್, ಸಿ.ಗುರುಸ್ವಾಮಿ, ವಿರೂಪಕ್ಷಿ, ಡಿ.ಎಸ್.ಪಾಲಯ್ಯ, ಪುಪ್ಪ, ಸೂರ್ಯಪ್ರಭಾ, ಸೌಭಾಗ್ಯಮ್ಮ, ಜ್ಯೋತಿ ಮುಂತಾದವರು ಭಾಗವಹಿಸಿದ್ದರು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252