Chitradurga news|nammajana.com |4-11-2024
ನಮ್ಮಜನ.ಕಾಂ, ಚಳ್ಳಕೆರೆ: ವಾಲ್ಮೀಕಿ ಮಹರ್ಷಿಗಳು ರಚಿಸಸಿದಂತ ಶ್ರೀ ರಾಮಾಯಣ ಮಹಾ ಕಾವ್ಯದ ಮೌಲ್ಯಗಳು (Valmiki Jayanti) ಸರ್ವಕಾಲಕ್ಕೂ ಶ್ರೇಷ್ಠ ಎಂದು ನಿವೃತ್ತ ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು
ಅವರು ತಳಕು ಹೋಬಳಿಯ ಭೋಗನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಪುತ್ತಳಿ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಸಹ ಬಾಳ್ವೆಗೆ ಸಾಮರಸ್ಯಕ್ಕೆ ಮತ್ತು ಭಾತೃತ್ವಕ್ಕೆ (Valmiki Jayanti) ಬೇಕಾದ ಎಲ್ಲಾ ಅಂಶಗಳನ್ನು ಶ್ರೀ ರಾಮಾಯಣ ಮಹಾಕಾವ್ಯದಲ್ಲಿ ಮಹರ್ಷಿ ವಾಲ್ಮೀಕಿ ಅವರು ಪ್ರತಿಬಿಂಬಿಸಿದ್ದಾರೆ.
ಇವುಗಳನ್ನು ಪರಿಪೂರ್ಣವಾಗಿ ನಮ್ಮಗಳ ಬದುಕಿನಲ್ಲಿ ಅನುಷ್ಠಾನಗೊಳಿಸುವುದು ಮಾತ್ರ ನಮ್ಮ ಮೇಲಿದೆ ಇದು ನಮ್ಮಗಳ ಕರ್ತವ್ಯ ಕೂಡ ಆಗಿದೆ ಸಹಸ್ರ (Valmiki Jayanti) ಶತಮಾನಗಳಿಂದಚೆಯು ಶ್ರೀ ರಾಮಾಯಣ ಮಹಾ ಕಾವ್ಯವನ್ನು ರಚಿಸಿದಂತಹ ವಾಲ್ಮೀಕಿ ಅವರು ನಮ್ಮೊಂದಿಗೆ ಜೀವಂತವಾಗಿರುತ್ತಾರೆ ಶ್ರೀ ರಾಮ ಸೀತೆ ಭರತ ಮತ್ತು ಆಂಜನೇಯರ ಆದರ್ಶ ಭಕ್ತಿ ಮತ್ತು ಪಾತಿವ್ರತೆ ಯನ್ನು ಜಗತ್ತು ಕೊಂಡಾಡಿದೆ ಮತ್ತು ಅನುಕರಣಿಸಿದೆ
ಹಿಂದುಳಿದ ಪ್ರದೇಶವಾಗಿರುವ ಈ ಗಡಿ ಭಾಗದ ನಾಡಿನಲ್ಲಿ ಶೈಕ್ಷಣಿಕ ನೆಲೆಗಟ್ಟು ಇನ್ನು ಉತ್ಕೃಷ್ಟವಾಗಿ ಬೆಳೆಯುವ ಅಗತ್ಯವಿದೆ ಅಂಬೇಡ್ಕರ್ ಅವರ ಆಶಯದಂತೆ ಶೈಕ್ಷಣಿಕ ನೆಲೆಗಟ್ಟು ಭದ್ರವಾಗಬೇಕಿದೆ ಕುಟುಂಬದಲ್ಲಿನ ಪ್ರತಿ ಮಗುವಿಗೆ ಶ್ರೀ ರಾಮಾಯಣ ಮಹಾ ಕಾವ್ಯದ ತಿರುಳನ್ನು ಹೇಳಿ ಅತ್ಯುನ್ನತ ವಾದ ಶಿಕ್ಷಣವನ್ನು ಮಕ್ಕಳಿಗೆ ಒದಗಿಸಬೇಕೆಂದು ಮನವಿ ಮಾಡಿದರು
ಸಮಾಜದ ಮುಖಂಡ ಪಟೇಲ್ ಜಿ.ತಿಪ್ಪೇಸ್ವಾಮಿ ಮಾತನಾಡಿ ಬಡತನ ಇದ್ದರೂ ಈ ಭಾಗದ ಜನ ಧರ್ಮ ಮತ್ತು ಸತ್ಯನಿಷ್ಠರು ಧಾರ್ಮಿಕ ಪರಂಪರೆ ಉಳ್ಳವರು ವಾಲ್ಮೀಕಿ ಅವರ ಮತ್ತು ಶ್ರೀ ರಾಮಾಯಣದ (Valmiki Jayanti) ಆದರ್ಶಗಳನ್ನು ಪಾಲಿಸುತ್ತಿರುವವರು ಇನ್ನು ಹೆಚ್ಚಿನ ಉನ್ನತ ಮಟ್ಟದ ಜೀವನ ನಡೆಸಬೇಕೆಂದರೆ ಈ ಭಾಗದವರು ಇನ್ನೂ ಹೆಚ್ಚು ಹೆಚ್ಚು ಸ್ವಾವಲಂಬಿಗಳಾಗಬೇಕು ಈ ಗ್ರಾಮದಲ್ಲಿ ಎಲ್ಲಾ ಕೋವಿನ ಜನಾಂಗಗಳಿದ್ದು ಎಲ್ಲರೂ ಸೇರಿ ಈ ದಿನ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ದಿನ ಭವಿಷ್ಯ 04-11-2024 | Dina Bhavishya kannada
ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆಂಜನಪ್ಪ ರವಿ ಪಾಲಣ್ಣ ಗ್ರಾಮದ ಎಲ್ಲಾ ಪ್ರಮುಖರು ಉಪಸ್ಥಿತರಿದ್ದರು.