Chitradurga news|nammajana.com|17-10-2024
ನಮ್ಮಜನ.ಕಾಂ, ಚಳ್ಳಕೆರೆ: ಅಪಾರ ಜ್ಞಾನ ಸಂಪತ್ತು ಹೊಂದಿದ್ದ ಮಹರ್ಷಿ ವಾಲ್ಮೀಕಿಯವರು ಸುಮಾರು 24 ಸಾವಿರ ಸಂಸ್ಕೃತ ಶ್ಲೋಕಗಳನ್ನು ರಾಮಾಯಣವಾಗಿ ಪರಿವರ್ತನೆ ಮಾಡಿದಂತಹ ಮಹಾನ್ ಚೇತನ. ನಾಡಿನ ವಾಲ್ಮೀಕಿ ಸಮುದಾಯದ ಸದಾಕಾಲ ಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳ ಪರಿಪಾಲನೆಯಲ್ಲಿ ತೊಡಗಿಕೊಳ್ಳುವ ಮೂಲಕ ಮಹಾನ್‌ಶಕ್ತಿಗೆ ಗೌರವಸಮರ್ಪಣೆ (Valmiki Jayanti Challakere) ಮಾಡಬೇಕೆಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಗುರುವಾರ ನಗರದ ವಾಲ್ಮೀಕಿ ಕಲ್ಯಾಣಮಂಟಪದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಸಮುದಾಯದ ಮುಖಂಡರು ಹಮ್ಮಿಕೊಂಡಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಾವಿರಾರು ವರ್ಷಗಳ ಹಿಂದೆಯೇ ಮಾನವೀಯ ಮೌಲ್ಯ, ಸಮಾನತೆ, ಸೌಹಾರ್ಧತೆಯ ಬಗ್ಗೆ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ ಮಹರ್ಷಿ ವಾಲ್ಮೀಕಿಯವರು ಸಮಸ್ತ ಮಾನವ (Valmiki Jayanti Challakere) ಸಮಾಜಕ್ಕೆ ಆದರ್ಶಪ್ರಾಯರು. ವಾಲ್ಮೀಕಿಯವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ರೇಹಾನ್ ಪಾಷ, ಇಂದು ನಾವೆಲ್ಲರೂ ಮಗರ್ಷಿ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮದಮೂಲಕ ಅವರು ನಾಡಿಗೆ ಸಲ್ಲಿಸಿದ ಸೇವೆಗಳನ್ನು ಸ್ಮರಿಸುವ ಕಾರ್ಯ ಮಾಡಲಾಗುತ್ತಿದೆ. ಸರ್ಕಾರ ವಾಲ್ಮೀಕಿಯವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಯಶಸ್ವಿಹೆಜ್ಜೆ ಇಟ್ಟಿದೆ. ಪ್ರಸ್ತುತ ವರ್ಷ ವಾಲ್ಮೀಕಿ ಸಮುದಾಯದಲ್ಲಿ ತಮ್ಮ ಸೇವಾಕಾರ್ಯದ (Valmiki Jayanti Challakere) ಮೂಲಕ ಗುರುತಿಸಿಕೊಂಡ ಐವರಿಗೆಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು.
ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸವಿಭಾಗದ ಸಹಪ್ರಾಧ್ಯಾಪಕಿ ಡಾ.ಜಯಮ್ಮ, ಮಹರ್ಷಿ ವಾಲ್ಮೀಕಿಯವರ ಬದುಕನ್ನು ಅರ್ಥಗರ್ಭಿತವಾಗಿ ವಿವರಿಸಿದರು.
ಇದನ್ನೂ ಓದಿ: ತನ್ನ ಹೆಬ್ಬೆರಳನ್ನೇ ಗುರು ಕಾಣಿಕೆಯಾಗಿ ಕೊಟ್ಟ ಸಮಾಜ ವಾಲ್ಮೀಕಿ ಸಮಾಜ: ಸಚಿವ ಡಿ.ಸುಧಾಕರ್ | Valmiki Jayanti Chitradurga
ವಾಲ್ಮೀಕಿ ಕಲ್ಯಾಣಮಂಟಪ ಟ್ರಸ್ಟ್ ಅಧ್ಯಕ್ಷ ಎಚ್.ಎಂ.ಮಲ್ಲಪ್ಪನಾಯಕ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಚನ್ನಂಗಿರಂಗಸ್ವಾಮಿ, ಯುವ ಮುಖಂಡ ಕೆ.ಟಿ.ಕುಮಾರಸ್ವಾಮಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಬಿಜೆಪಿ ಮುಖಂಡರಾದ ಬಾಳೆಮಂಡಿರಾಮದಾಸ್, ಡಾ.ನಾಗೇಂದ್ರನಾಯಕ, ನಗರಸಭಾ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯ ಎಸ್.ಜಯಣ್ಣ, ವೆಂಕಟೇಶ್, ರಮೇಶ್‌ಗೌಡ, ಕೆ.ವೀರಭದ್ರಪ್ಪ, ಸುಮಭರಮಣ್ಣ, ಸಿ.ಶ್ರೀನಿವಾಸ್, ಸಿ.ಟಿ.ವೀರೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಸಿ.ನಾಗರಾಜು, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಂ.ಟಿ.ಶಿವರಾಜು, ಪೌರಾಯುಕ್ತ ಜಗರೆಡ್ಡ್ಪಿ, ಇಒ ಶಶಿಧರ, ಮಹಿಳಾ ಸಂಘದ ಅಧ್ಯಕ್ಷೆ ಯಶೋಧಮ್ಮ, ಕಾರ್ಯದರ್ಶಿ ಸೂರ್ಯಪ್ರಭಾ, ಎಲ್‌ಐಸಿತಿಪ್ಪೇಸ್ವಾಮಿ, ಸೌಭಾಗ್ಯಮ್ಮ, ಬಿಇಒ ಕೆ.ಎಸ್.ಸುರೇಶ್, ಸೂರನಾಯಕ, ಜೆ.ರಘುವೀರನಾಯಕ, ಸಿ.ಟಿ.ಶ್ರೀನಿವಾಸ್, ಡಾ.ಲೋಕೇಶ್, ಸಿ.ಗುರುಸ್ವಾಮಿ, ಸಂದೀಪನಾಯಕ, ಪಿ.ತಿಪ್ಪೇಸ್ವಾಮಿ, ಬಡಗಿಪಾಪಣ್ಣ, ಡಾ.ಜಿತಿಪ್ಪೇಸ್ವಾಮಿ, ಡಾ.ಲೋಕೇಶ್, ಟಿ.ಜೆ.ತಿಪ್ಪೇಸ್ವಾಮಿ, ಗಾಡಿತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252