Chitradurga News | Nammajana.com | 25-09-2025
ನಮ್ಮಜನ.ಕಾಂ, ಚಳ್ಳಕೆರೆ: ಪ್ರತಿವರ್ಷದಂತೆ (Valmiki Jayanti) ಈ ವರ್ಷವೂ ಮಹರ್ಷಿ ಶ್ರೀವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಭಕ್ತಿ, ಶ್ರದ್ದೆ ಹಾಗೂ ವಿಜೃಂಭಣೆಯಿಂದ ಆಚರಿಸೋಣ. ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಎಲ್ಲರೂ ಪಾಲಿಸುವ ಸಂಕಲ್ಪಮಾಡೋಣ, ಅ.೭ರಂದು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ವಾಲ್ಮೀಕಿ ಸಮುದಾಯದ ಸಂಘಟನೆಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಂಯುಕ್ರಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಎಲ್ಲರೂ ಈ ಕಾರ್ಯಕ್ರಮದಲ್ಲಿ ತಪ್ಪದೆ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಇದನ್ನೂ ಓದಿ: P. Raghu: ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗಕ್ಕೆ ಹೊಳಲ್ಕೆರೆ ಫೈರ್ ಬ್ರಾಂಡ್ ಖ್ಯಾತಿ ಪಿ.ರಘು ನೂತನ ಅಧ್ಯಕ್ಷ
ಅವರು, ಬುಧವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪರಿಶಿಷ್ಟ ಪಂಗಡ ಇಲಾಖೆ ಹಮ್ಮಿಕೊಂಡಿದ್ದ ಪೂರ್ವಭಾವಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಪರಿಶಿಷ್ಟ ಪಂಗಡ ಕಲ್ಯಾಣಾ ಇಲಾಖೆ, ತಾಲ್ಲೂಕು ಆಡಳಿತ, ಸಮುದಾಯಗಳ ಸಹಕಾರದಲ್ಲಿ ಕಾರ್ಯಕ್ರಮಗಳನ್ನುರೂಪಿಸಲಾಗಿದೆ.
ವಿವಿಧ ಇಲಾಖೆಯ ಅಧಿಕಾರಿಗಳು ಸಹ ತಮಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಬೇಕು, ಅ.೭ರಂದು ಮೆರವಣಿಗೆ ಬೆಳಗ್ಗೆ ೧೦ಕ್ಕೆ ವಾಲ್ಮೀಕಿ ವೃತ್ತದಿಂದ ಆರಂಭವಾಗಿ ಮಧ್ಯಾಹ್ನ ೨ಕ್ಕೆ ಕಾರ್ಯಕ್ರಮ ಆಯೋಜಿಸಿರುವ ವಾಲ್ಮೀಕಿ ಕಲ್ಯಾಣಮಂಟಪಕ್ಕೆ ತಲುಪಬೇಕಿದೆ.
ಅ.೭ರಂದು ಮಹರ್ಷಿ ಶ್ರೀವಾಲ್ಮೀಕಿ ಜಯಂತ್ಯೋತ್ಸವ
ಮೆರವಣಿಗೆಯಲ್ಲಿ(Valmiki Jayanti) ಕಲಾತಂಡಗಳು ಭಾಗವಹಿಸುವವು, ಸಭಾ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿಯವರನ್ನು ಕುರಿತಂತೆ ಉಪನ್ಯಾಸ ನಡೆಯಲಿದ್ದು ಪ್ರತಿಭಾಪುರಸ್ಕಾರ ಹಾಗೂ ಸಮಾಜಕ್ಕೆ ಸೇವೆಸಲ್ಲಿಸಿದ ಹಿರಿಯರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗ, ಸಂಘ ಸಂಸ್ಥೆಯ ಪ್ರಮುಖರು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ತಹಶೀಲ್ದಾರ್ ರೇಹಾನ್‌ಪಾಷ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ, ಪೌರಾಯುಕ್ತ ಎಚ್.ಜಿ.ಜಗರೆಡ್ಡಿ, ಗ್ಯಾರಂಟಿ ಸಮಿತಿಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷೆ ಬಿ.ಶಿಲ್ಪಮುರುಳಿ, ಉಪಾಧ್ಯಕ್ಷೆ ಕವಿತಾವೀರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಪ್ಪ, ನಾಮಿನಿ ಸದಸ್ಯರಾದ ನೇತಾಜಿಪ್ರಸನ್ನ, ವೀರಭದ್ರ, ಕೆಡಿಪಿ ಸದಸ್ಯ ಸುರೇಶ್‌ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್, ಸಮುದಾಯದ ಮುಖಂಡರಾದ ಕೆ.ಸೂರನಾಯಕ, ಸಂದೀಪ್(ಸೂರ್ಯ), ಡಾ.ಜಿ.ತಿಪ್ಪೇಸ್ವಾಮಿ, ಎಲ್‌ಐಸಿತಿಪ್ಪೇಸ್ವಾಮಿ, ವಾಲ್ಮೀಕಿ ಮಹಿಳಾ ಸಂಘದ ಅಧ್ಯಕ್ಷೆ ಯಶೋಧಮ್ಮ, ಕಾರ್ಯದರ್ಶಿ ಸೂರ್ಯಪ್ರಭಾ, ಡಾ.ಡಿ.ಎನ್.ಮಂಜುನಾಥ, ಕೃಷ್ಣಮೂರ್ತಿ, ಟಿ.ಜೆ.ತಿಪ್ಪೇಸ್ವಾಮಿ, ಡಾ.ರಾಮ್‌ರಾಜ್, ಡಾ.ಡಿ.ಎನ್.ರಘುನಾಥ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: Power cut: ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿ ಎಂ.ಟಿ.ಶಿವರಾಜ್ ಸ್ವಾಗತಿಸಿ, ವಂದಿಸಿದರು.
