
Chitradurga news|nammajana.com|24-03-2025
ನಮ್ಮಜನ.ಕಾಂ, ಚಿತ್ರದುರ್ಗ: ಕೋಟೆ ನಾಡಿನ ಜನರ ಹಾಗೂ (Valmiki Shri) ನಾಯಕ ಸಮುದಾಯದ ಒತ್ತಾಸೆಯಂತೆ ಚಿತ್ರದುರ್ಗದಲ್ಲಿ ಸರ್ಕಾರದ ವತಿಯಿಂದ ರಾಜಾ ವೀರ ಮದಕರಿ ನಾಯಕರ ಥೀಮ್ ಪಾರ್ಕ್ ಮಾಡಬೇಕು ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಪ್ರವಾಸಿ ಮಂದಿರದಲ್ಲಿ ಸೋಮವಾರ ಈ ಕುರಿತು ಮನವಿ ಸಲ್ಲಿಸಿರುವ ಸ್ವಾಮೀಜಿ, ರಾಜಾ ವೀರ ಮದಕರಿ ನಾಯಕರ ಥೀಮ್ ಪಾರ್ಕ ಮಾಡುತ್ತೇವೆಂದು ಕೆಂದ್ರ ಸರ್ಕಾರ ಘೋಷಣೆ ಮಾಡಿತ್ತು ಆದರೆ ಇದುವರೆಗೂ ಅದು ಈಡೇರಿಲ್ಲ ಆದ್ದರಿಂದ ತಮ್ಮ ಸರ್ಕಾರದ ಅವಧಿಯಲ್ಲಿ ಮದಕರಿನಾಯಕ ಥೀಮ್ ಪಾರ್ಕ ಮಾಡಬೇಕು.

ಚಿತ್ರದುರ್ಗವನ್ನು ಆಳಿದ ರಾಜಾ ಮತ್ತಿ ತಿಮ್ಮಣ್ಣನಾಯಕರಿಂದ ಕೊನೆ ರಾಜಾವೀರ ಮದಕರಿನಾಯಕರವರೆಗೆ ಈ ನಾಡಿಗೆ (Valmiki Shri) ತನ್ನದೇ ಆದ ಕೊಡುಗೆ ನೀಡಿದ್ದಾರೆ ಇವರ ಕಾಲದಲ್ಲಿ ಈ ನಾಡು ಸುವ ದುರ್ಗದ ರಾಜರ ಇತಿಹಾಸ ಸಾರಲು ದುರ್ಗೋತ್ಸವ (Madakari) ಮಾಡಿ ರ್ಣಯುಗವಾಗಿದೆ ಎಂದು ಅನೇಕ ಇತಿಹಾಸಗಾರರು ತಿಳಿಸಿದ್ದಾರೆ.
ದುರ್ಗದ ರಾಜರ ಇತಿಹಾಸ ಸಾರಲು ದುರ್ಗೋತ್ಸವ ಮಾಡಿ
ಈ ನಾಡಿಗೆ ತನ್ನದೇ ಆದ ಸಂಸ್ಕೃತಿ ಗೌರವವಿದೆ. ಅದನ್ನು ಉಳಿಸಲು ಮುಂದಿನ ಪೀಳಿಗೆಗೆ ಪರಿಚಹಿಸಲು ಸರ್ಕಾರದ ವತಿಯಿಂದ ದುರ್ಗೋತ್ಸವ ಕಾರ್ಯಕ್ರಮ ಆಚರಿಸಬೇಕು. ಜಿಲ್ಲೆಯಲ್ಲಿ ಅತಿ ಹೆಚ್ಚು ಬುಡಕಟ್ಟು ಸಮುದಾಯವನ್ನು ಹೊಂದಿದ್ದು ಚಿತ್ರದುರ್ಗದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿಯನ್ನು ಕೂಡ ಸಲ್ಲಿಸಲಾಗಿದೆ ಆದ್ದರಿಂದ ತಾವು ಸರ್ಕಾರದ ಗಮನಕ್ಕೆ ತಂದು ಬುಡಕಟ್ಟು ವಿಶ್ವ ವಿದ್ಯಾಲಯ ಸ್ಥಾಪಿಸಬೇಕೆಂದು (Valmiki Shri) ಸಮುದಾಯದ ಒತ್ತಾಸೆಯಾಗಿದೆ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Gold medal | ಬಡ ರೈತನ ಮಗಳಿಗೆ 15 ಚಿನ್ನದ ಪದಕ
ಈ ಸಂದರ್ಭದಲ್ಲಿ ಶಾಸಕರುಗಳಾದ ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ ಕೆ.ಸಿ.ವಿರೇಂದ್ರ ಪಪ್ಪಿ ಮತ್ತು ಸಮಾಜದ ಮುಖಂಡರಾ ಹೆಚ್.ಜೆ.ಕೃಷ್ಣಮೂರ್ತಿ, ವೆಂಕಟೇಶ್, ಎಟಿಎಸ್ ತಿಪ್ಪೇಸ್ವಾಮಿ, ಹಳದರ ತಿಪ್ಪೇಸ್ವಾಮಿ, ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ ಇದ್ದರು.
