Chitradurga news|nammajana.com|14-8-2024
ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅನಾಹುತ ಹಿನ್ನೆಲೆ ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಎಫ್. ಎಚ್. ಲಮಾಣಿ ನೇತೃತ್ವದ ತಂಡ ಪರಿಶೀಲನೆ
ನಮ್ಮಜನ.ಕಾಂ, ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಜನರ ಜೀವನಾಡಿ ಏಕೈಕ ಜಲಾಶಯ ವಿವಿ ಸಾಗರ ಜಲಾಶಯದ (Vani Vilasa Sagar Dam) ಸುರಕ್ಷಿತವಾಗಿದೆ. ಯಾವುದೇ ಸಮಸ್ಯೆ ಇಲ್ಲ, ಯಾವುದೇ ಗೇಟ್, ನೀರು ಸೋರಿಕೆಯಾಗಲೀ, ಭವಿಷ್ಯದಲ್ಲಿ ಕ್ರಸ್ಟ್ ಕಳಚಿ ಬೀಳುವ ಅಥವಾ ಡ್ಯಾಂ ನಿಂದ ನೀರು ಹೊರ ಹೋಗುವ ಅಪಾಯಗಳು ಏನಿಲ್ಲ.
ಇದು ತಜ್ಞ ಇಂಜಿನಿಯರ್‌ಗಳ ಉವಾಚ, ತುಂಗ ಭದ್ರಾ ಜಲಾಶಯ ಕ್ರಸ್ಟ್ ಗೇಟ್ ಕೊಚ್ಚಿ ಹೋಗು ಅಪಾಯದ ಸಂದರ್ಭ ಎದುರಾದ ಹಿನ್ನಲೆ ರಾಜ್ಯ ಸರ್ಕಾರ ಎಲ್ಲ ಜಲಾಶಯಗಳ (Vani Vilasa Sagar Dam) ವಾಸ್ತವಾಂಶ ಪರಿಶೀಲನೆಗೆ ಸೂಚಿಸಿ ಬುಧವಾರವೇ ವರದಿ ನೀಡುವಂತೆ ತಾಕೀತು ಮಾಡಿತ್ತು.
ಅದರಂತೆ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಎಫ್. ಎಚ್. ಲಮಾಣಿ ನೇತೃತ್ವದ ತಂಡ ಮಂಗಳವಾರ ವಿವಿ ಸಾಗರ ಜಲಾಶಯ ಭೇಟಿ ನೀಡಿ ಜಲಾಶಯವನ್ನು ಗೇಟ್ ಗಳ ಇಂಚಿಂಚು ಪರಿಶೀಲಿಸಿ ಅಪಾಯದ ಲಕ್ಷಗಳೇನಾದರೂ (Vani Vilasa Sagar Dam) ಇವೆಯೇ ಎಂಬುದನ್ನು ಖಚಿತಪಡಿಸಿಕೊಂಡರು.
ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಎಫ್.ಎಚ್.ಲಮಾಣಿ ನೇತೃತ್ವದ ತಂಡ ವಿವಿಸಾಗರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಎಂಬುದರ ಬಗ್ಗೆ ಪರಿಶೀಳಿಸಿದರು. ಜಲಾಶಯದ ಗೋಡೆಗಳಿಂದ ಏನಾದರೂ ನೀರು ಬಸಿದು ಹೊರಹೋಗುತ್ತಿರಬಹುದೇ ಎಂಬ ಸಂದೇಹಗಳ ನಿವಾರಣೆ ಮಾಡಿಕೊಂಡರು.
ಇದನ್ನೂ ಓದಿ: ದಿನ ಭವಿಷ್ಯ | ಬುಧವಾರ | 14 ಆಗಸ್ಟ್ 2024 | Dina Bhavishya
ವಾಣಿ ವಿಲಾಸ ಸಾಗರ ಭರ್ತಿಯಾದಲ್ಲಿ * ನೀರನ್ನು ನದಿಗೆ ಬಿಡಲು ಕ್ರಸ್ಟ್ ಗೇಟ್ ಗಳಿಲ್ಲ, ನೋ ಪ್ರಾಬ್ಲಂ. (Vani Vilasa Sagar Dam)
ವಿವಿಸಾಗರ ಜಲಾಶಯಕ್ಕೆ ಕ್ರಸ್ಟ್ ಗೇಟ್ ವ್ಯವಸ್ಥೆಯಿಲ್ಲ. 30 ಟಿಎಂಸಿ ಸಾಮರ್ಥ್ಯದ ಜಲಾಶಯ ಭರ್ತಿಯಾದಾಗ ಸಹಜವಾಗಿಯೇ ಕೋಡಿಯಿಂದ ನೀರು ಹೊರ ಹೋಗುತ್ತದೆ. ಕೆರೆಗಳ ಮಾದರಿಯಲ್ಲಿ ಕೋಡಿ ಸೃಜಿಸಲಾಗಿದೆ. ಕ್ರಸ್ಟ್ ಗೇಟ್ ಉಸಾಬರಿ ಈ ಜಲಾಶಯಕ್ಕೆ ಇಲ್ಲ. ಆದರೆ ಅಚ್ಚು ಕಟ್ಟು ಪ್ರದೇಶಕ್ಕೆ ನೀರುಣಿಸುವಾಗ ಕಾಲುವೆಗೆ ನೀರು ಹಾಯಿಸುವ ಪುಟ್ಟ ಕ್ರಸ್ಟ ಗೇಟ್ ಇದ್ದು ಮಾನವ ಚಾಲಿತ ವ್ಯವಸ್ಥೆ ಇದಾಗಿದೆ. ಕೈಯಿಂದಲೇ ತಿರುಗಿಸಿ ಗೇಟ್ಗಳನ್ನು ಎತ್ತಲಾಗುತ್ತದೆ.
ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಎಫ್. ಎಚ್. ಲಮಾಣಿ ಹೇಳಿದಿಷ್ಟು (Vani Vilasa Sagar Dam)
ಪರಿಶೀಲನೆ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಎಫ್. ಎಚ್. ಲಮಾಣಿ, ಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ (Vani Vilasa Sagar Dam) ಸಚಿವರ ಸೂಚನೆ ಮೇರೆಗೆ ಜಲಾಶಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ.
ಅಧಿಕಾರಿಗಳ ತಂಡ
ಜಲಾಶಯ ಗಟ್ಟಿ ಮುಟ್ಟಾಗಿದ್ದು ಆತಂಕ ಪಡುವ ಯಾವುದೇ ಲಕ್ಷಣಗಳಿಲ್ಲವೆಂದರು. ಭದ್ರಾ ಮೇಲ್ದಂಡೆ ಅಧೀಕ್ಷಕ ಇಂಜಿನಿಯರ್‌ಮಧುಕುಮಾರ್, ಕಾರ್ಯಪಾಲಕ ಇಂಜಿನಿಯರ್‌ಚಂದ್ರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ವಿಜಯ್ ಕುಮಾರ್, ಸಹಾಯಕ ಇಂಜಿನಿಯರ್ ಮಾನಸ ಪರಿಶೀಲನಾ ತಂಡದಲ್ಲಿ ಇದ್ದರು.