Chitradurga news|nammajana.com|6-8-2024
ನಮ್ಮಜನ.ಕಾಂ, ಹೊಸದುರ್ಗ: ಮಧ್ಯ ಕರ್ನಾಟಕದ ಜಲಪಾತ್ರೆ ಎಂದೇ ಖ್ಯಾತಿ ಪಡೆದಿರುವ ವಿವಿ ಸಾಗರ ಜಲಾಶಯಕ್ಕೆ (Vani Vilasa Sagara) ಸೋಮವಾರ ರಾತ್ರಿಯಿಂದಲೇ ಭದ್ರಾ ಜಲಾಶಯದಿಂದ ನೀರು ಹರಿಸಲಾಗಿದ್ದು, ಮಂಗಳವಾರ ಸಂಜೆ ಹೊತ್ತಿಗೆ ವೇದಾವತಿ ನದಿಯ ಒಡಲಿಗೆ ಭದ್ರಾ ನೀರು ಬಂದು ಸೇರಿದೆ. ಇದರಿಂದಾಗಿ ಕೋಟೆನಾಡಿನ ಜನರ ಮೊಗದಲ್ಲಿ ಸಂತಸ ಮೂಡಿದೆ.
ಲಕ್ಕವಳ್ಳಿಯ ಭದ್ರಾ ಜಲಾಶಯ ಭರ್ತಿ
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಲಕ್ಕವಳ್ಳಿಯ ಭದ್ರಾ ಜಲಾಶಯ (Vani Vilasa Sagara) ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದ ನೀರನ್ನು ವಿವಿ ಸಾಗರ ಜಲಾಶಯಕ್ಕೆ ಹರಿಸಬೇಕೆಂದು ಸರ್ಕಾರ ಆದೇಶಿಸಿದೆ.
ಅದರ ನಿಯಮದಂತೆ ಸೋಮವಾರ ರಾತ್ರಿ ಅಜ್ಜಂಪುರ ತಾಲೂಕಿನ ಬೆಟ್ಟ ತಾವರೆಕೆರೆಯ ಬಳಿಯ ಪಂಪ್ ಹೌಸ್ ಮೂಲಕ ಒಂದು ಕ್ರೆಸ್ಟ್ ಗೇಟ್ ಮೂಲಕ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಬಿಡುವ ಕಾರ್ಯವನ್ನು ನೀರಾವರಿ ನಿಗಮದ ಅಧಿಕಾರಿಗಳು ಯಶಸ್ವಿಗೊಳಿಸಿದ್ದಾರೆ.
ವಿವಿ ಸಾಗರ ಪ್ರಸ್ತುತ ನೀರಿನ ಮಟ್ಟ 114.7 (Vani Vilasa Sagara)
ವಿವಿ ಸಾಗರ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 114.7 ಅಡಿ ಇದೆ. ಡ್ಯಾಮ್ ಭರ್ತಿಯಾಗಲೂ ಇನ್ನೂ 12 ಟಿಎಂಸಿ ನೀರು ಬೇಕಿದೆ. ಭದ್ರಾ ಜಲಾಶಯದಿಂದ ನಿತ್ಯವೂ 700 (Vani Vilasa Sagara) ಕ್ಯೂಸೆಕ್ ನಷ್ಟು ನೀರು ಹರಿದು ಬಂದರೆ, 17 ದಿನಕ್ಕೆ ಒಂದು ಟಿಎಂಸಿಯಷ್ಟು ನೀರು ಬರಲಿದೆ. ಭದ್ರಾ ನೀರಿನ ಜೊತೆಗೆ ಉತ್ತಮ ಮಳೆಯಾದರೆ, ಮತ್ತೊಮ್ಮೆ ವಾಣಿವಿಲಾಸಸಾಗರ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.
ಜಲಾಶಯಕ್ಕೆ ಇನ್ನೂ 12 ಟಿಎಂಸಿ ನೀರನ್ನು ಸಂಗ್ರಹ (Vani Vilasa Sagara) ಮಾಡಿಕೊಳ್ಳುವ ಸಾಮರ್ಥ್ಯವಿದೆ ಎಂದು ವಿಶ್ವೇಶ್ವರಯ್ಯ ಜಲನಿಗಮದ ಕಾರ್ಯಪಾಲಕ ಇಂಜಿನಿಯರ್ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.