Chitradurga news | nammajana.com | 29-07-2025
ನಮ್ಮಜನ.ಕಾಂ, ಹೊಸದುರ್ಗ: ಭದ್ರಾ(Vanivilasa sagara) ಜಲಾಶಯದ ಶಾಂತಿಪುರ ಪಂಪ್ ಹೌಸ್ ಮುಖ್ಯ ಕಾಲುವೆಯಿಂದ ವಿ.ವಿ.ಸಾಗರ ಜಲಾಶಯದತ್ತ ಮೊನ್ನೆ(ಭಾನುವಾರ)ಯಿಂದ ನೀರು ಹರಿದು ಬರುತ್ತಿದ್ದು, ಜಿಲ್ಲೆಯ ರೈತರಲ್ಲಿ ಕೃಷಿ ಕಾರ್ಯಗಳಿಗೆ ಮತ್ತಷ್ಟು ಭರವಸೆ ಹೆಚ್ಚಿಸಿದೆ. ಮಧ್ಯ ಕರ್ನಾಟಕದ ಜಲಪಾತ್ರೆ ಎಂದೇ ಖ್ಯಾತಿ ಪಡೆದಿರುವ ವಾಣಿ ವಿಲಾಸ ಸಾಗರ ಜಲಾಶಯ 4ನೇ ಬಾರಿಗೆ ಕೋಡಿಬೀಳುವ ಮುನ್ಸೂಚನೆ ಕಾಣುತ್ತಿದೆ. ಜುಲೈ 27ರಿಂದ 4 ತಿಂಗಳವರೆಗೆ ನೀರು ಬರಲಿದ್ದು, ವರ್ಷದಲ್ಲಿ 2ನೇ ಬಾರಿ ಜಲಾಶಯ ತುಂಬಿ ಕೋಡಿ ಬೀಳಲಿದೆ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ.
ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಜಲಾಶಯ ನಿರ್ಮಾಣವಾಗಿ 89 ವರ್ಷಗಳ ನಂತರ ಮೊದಲ ಬಾರಿಗೆ 1934 ರಲ್ಲಿ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ಆದಾದ ಮೇಲೆ 2022, ಸೆ. 2ರಂದು ಡ್ಯಾಂ 2ನೇ ಬಾರಿಗೆ ತುಂಬಿ ಕೋಡಿ ಬಿದ್ದಿತ್ತು. 2025ರ ಜ. 12ರಂದು 3ನೇ ಬಾರಿ ತುಂಬಿ ಕೋಡಿ ಬೀಳುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣವಾಗಿತ್ತು. ಪ್ರಸ್ತುತ ಇದೀಗ, 124.ಅಡಿಯಷ್ಟು ನೀರಿನ ಸಂಗ್ರಹವಿದ್ದು, ಜಲಾಶಯ ತುಂಬಲು ಇನ್ನೂ 6.ಅಡಿ ಮಾತ್ರ ಬಾಕಿಯಿದೆ.
ಜುಲೈ 27ರಿಂದ 4 ತಿಂಗಳು ಭದ್ರಾದಿಂದ ನೀರು ಹರಿದರೆ ತರೀಕೆರೆ, ಕಡೂರು, ಅಜ್ಜಂಪುರ ಮತ್ತು ಹೊಸದುರ್ಗ ತಾಲೂಕಿನ ವ್ಯಾಪ್ತಿಯ ಕೆಲವು ಕೆರೆಗಳು ಭರ್ತಿಯಾಗಿ ಒಂದು ವಾರದೊಳಗಾಗಿ ಜಲಾಶಯಕ್ಕೆ ನೀರು ಬಂದು ಸೇರಲಿವೆ. ನಿತ್ಯ 600.ಕ್ಯುಸೆಕ್ ನಷ್ಟು ನೀರು ಜಲಾಶಯದತ್ತ ಬರಲಿದೆ.
ಈಗಾಗಲೇ, ಮದಗದಕೆರೆ(Vanivilasa sagara) ಭರ್ತಿಯಾಗಿ ಕೋಡಿ ಬಿದ್ದಿದ್ದು, ಕೆರೆಯ ನೀರು ವೇದಾವತಿ ನದಿಯ ಒಡಲು ಸೇರಿದೆ. ಜೊತೆಗೆ ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆ ಬರುತ್ತಿದ್ದು, ವಿವಿ ಸಾಗರ ಜಲಾಶಯದ ಒಳಹರಿವು ಕೂಡ ಹೆಚ್ಚಾಗಲಿದೆ. ಇದರಿಂದಾಗಿ 2025 ರೊಳಗೆಯೇ ಜಲಾಶಯ ಭರ್ತಿಯಾಗಲಿದೆ. ಇತಿಹಾಸದಲ್ಲಿ ಜಲಾಶಯ 4ನೇ ಬಾರಿಗೆ ಕೋಡಿ ಬಿದ್ದು, ಐತಿಹಾಸಿಕ ದಾಖಲೆ ನಿರ್ಮಾಣ ಮಾಡಲಿದೆ ಎಂಬ ಲೆಕ್ಕಾಚಾರ ಜನರದ್ದಾಗಿದೆ.
ಇದನ್ನೂ ಓದಿ: ವಿ ವಿ ಸಾಗರ ನೀರಿನ ಮಟ್ಟದಲ್ಲಿ ಇಳಿಕೆ
4.25 ಟಿಎಂಸಿ ನೀರು ಹರಿಸಲು ಆದೇಶ
ಈಗಾಗಲೇ, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯಿಂದ ನೀರು ಹರಿದು ಬರುತ್ತಿದ್ದು, ನೀರಿನ ಹಾದಿಯ ಹಳ್ಳ, ಕೊಳ್ಳಗಳ ಮೂಲಕ ಭದ್ರೆ ವೇದಾವತಿ ನದಿಯ ಒಡಲು ಸೇರಲಿದ್ದಾಳೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಕೆರೆ ತುಂಬಿಸಲು 0.24 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಅದರಂತೆಯೇ, ಹೊಸದುರ್ಗ ತಾಲ್ಲೂಕಿನ ಕೆರೆ ತುಂಬಿಸಲು 0.50 ಅಡಿ ನೀರು ಹಂಚಿಕೆ ಮಾಡಲಾಗಿದ್ದು, ವಿವಿಧ ಕೆರೆ, ಬ್ಯಾರೇಜ್‌ಗಳು ತುಂಬಿದ ನಂತರವೇ ನೀರು ವಿ.ವಿ ಸಾಗರ ಸೇರಲಿದೆ. ಒಟ್ಟಾರೆ 4.25 ಟಿ.ಎಂ.ಸಿ ಅಡಿ ನೀರು ಹರಿಸಲು ವಿಶ್ವೇಶ್ವರಯ್ಯ ಜಲನಿಗಮ ಆದೇಶ ನೀಡಿದೆ.
ರಾಣಿಯ ಒಡವೆ ಅಡವಿಟ್ಟು ಡ್ಯಾಮ್ ನಿರ್ಮಾಣ
ಜನರು ಮತ್ತು ಜಾನುವಾರುಗಳಿಗೆ(Vanivilasa sagara) ಕುಡಿಯುವ ನೀರಿಗೂ ತತ್ವಾರ ಬಂದಂತಹ ಪರಿಸ್ಥಿತಿಯಲ್ಲಿ ಮೈಸೂರು ಮಹಾರಾಜರು ಮಾರಿಕಣಿವೆಯ ಎರಡು ಗುಡ್ಡಗಳ ನಡುವೆ ವಾಣಿವಿಲಾಸ ಸಾಗರ ಜಲಾಶಯವನ್ನು 1907 ರಲ್ಲಿ ನಿರ್ಮಿಸಿದರು. ಜಲಾಶಯದ ನಿರ್ಮಾಣದ ಕಾಲದಲ್ಲಿ ಸಂಪನ್ಮೂಲದ ಕೊರತೆ ಉಂಟಾಗಿದ್ದರಿಂದ ಮಹಾರಾಣಿಯವರ ಒಡವೆ ಅಡವಿಟ್ಟು ಹಣ ಹೊಂದಿಸಿ, ಜಲಾಶಯ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದರು ಎನ್ನಲಾಗುತ್ತಿದೆ.
ಇದನ್ನೂ ಓದಿ: ಶಾಸಕರ ಮಾರ್ಗದರ್ಶನದಲ್ಲಿ ನಗರಸಭೆಯಿಂದ ಚಳ್ಳಕೆರೆ ನಗರ ಅಭಿವೃದ್ದಿ: ಅಧ್ಯಕ್ಷೆ ಶಿಲ್ಪ ಮುರುಳೀಧರ
ಹಿನ್ನೀರಿನ ಜನರಲ್ಲಿ ಆತಂಕ
ವಿವಿ ಸಾಗರ ಜಲಾಶಯ ಭರ್ತಿಯಾಗುವುದು ಜಿಲ್ಲೆಯ ರೈತರಲ್ಲಿ ಸಂತಸವನ್ನುಂಟು ಮಾಡಿದರೆ, ಹಿನ್ನೀರಿನ ಭಾಗದ ಜನರಲ್ಲಿ ಆತಂಕವನ್ನುಂಟು ಮಾಡುತ್ತದೆ. 2022ರಲ್ಲಿ ಡ್ಯಾಮ್ ಕೋಡಿ ಬಿದ್ದಾಗ ಅಧಿಕ ಪ್ರಮಾಣದ ನೀರು ಬಂದಿದ್ದರ ಪರಿಣಾಮ ಹಿನ್ನೀರಿನ ಕೆಲ ಗ್ರಾಮಗಳ ಜನರು ಮನೆ-ಜಮೀನುಗಳನ್ನು ಕಳೆದುಕೊಂಡು ಕಣ್ಣೀರು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ, ಜಲಾಶಯ ಭರ್ತಿಯಾಗುವ ನಿರೀಕ್ಷೆಯಿದ್ದು, ಮತ್ತೆ ಅಂತಹ ಸಮಸ್ಯೆಗಳು ಎದುರಾಗದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಹಿಸಬೇಕಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252