Chitradurga news|Nammajana.com|20-8-2025
ನಮ್ಮಜನ.ಕಾಂ, ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 48ರ ಬಳಿ (Varshita Murder Case) ಪತ್ತೆಯಾದ ಅಪ್ರಾಪ್ತ ಯುವತಿ ಶವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕ್ಯಾನ್ಸರ್ ಥರ್ಡ್ ಸ್ಟೇಜ್ನಲ್ಲಿರುವ ಆರೋಪಿ ಚೇತನ್ ಎಂಬಾತನೇ ಕೊಲೆ ಮಾಡಿದ್ದು, ಸದ್ಯ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ಕೋವೇರಹಟ್ಟಿ ಮೂಲದ ವರ್ಷಿತಾ(19) ಬರ್ಬರವಾಗಿ ಹತ್ಯೆಗೊಳಗಾಗಿದ್ದ ಯುವತಿ,ಚಿತ್ರದುರ್ಗ ಗ್ರಾಮಾಂತರ (Varshita Murder Case) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೇತನ್ ನನ್ನ ಪುತ್ರಿಯ ಕೊಲೆ ಮಾಡಿದ್ದಾನೆ ಎಂದ ತಾಯಿ
ಮೃತ ವರ್ಷಿತಾ ತಾಯಿ ಜ್ಯೋತಿ ತಿಪ್ಪೇಸ್ವಾಮಿ ಹೇಳಿಕೆ ನೀಡಿದ್ದು, ಮೊನ್ನೆ ರಾತ್ರಿ ಕರೆ ಮಾಡಿದಾಗ ಮಗಳು ಅಮ್ಮ ಅಂದಳು ಅಷ್ಟೇ. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿ ಸಂಪರ್ಕಕ್ಕೆ ಸಿಕ್ಕಿಲ್ಲ. ನಿನ್ನೆ ಬೆಳಗ್ಗೆ ಹಾಸ್ಟೆಲ್ ಬಳಿಗೆ ಭೇಟಿ ಮಾಡಲು ನಾನು ಬಂದಿದ್ದೆ. ಆದರೂ ಸಿಗಲಿಲ್ಲ. ಬಳಿಕ ಐಮಂಗಲ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದೆವು. ನಿನ್ನೆ ಸಂಜೆ ವೇಳೆಗೆ ವರ್ಷಿತಾ ಕೊಲೆ (Varshita Murder Case) ಆಗಿರುವ ವಿಚಾರ ತಿಳಿಸಿದರು. ಚಿತ್ರದುರ್ಗದ ಚೇತನ್ ಫೋನ್ ಮಾಡಿ ಕರೆದೊಯ್ದು ನನ್ನ ಪುತ್ರಿಯ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದರು.
ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿನಿ ಕೊಲೆ | ಪೆಟ್ರೋಲ್ ಹಾಕಿ ಸುಟ್ಟಿರುವ ಶಂಕೆ | Chitradurga Murder
ಹಾಸ್ಟೆಲ್ ಬಳಿಗೆ ಬಂದಾಗ ನನಗೆ ಡೌಟ್ ಇತ್ತು. ಹಾಸ್ಟೆಲ್ನ ಕೆಲ ಹುಡುಗಿಯರು ಚೇತನ್ ಹೆಸರು ಹೇಳಿದರು. ಹಾಸ್ಟೆಲ್ ಬಳಿಗೆ ಬಾ ಎಂದು ಚೇತನ್ಗೆ ಕರೆ ಮಾಡಿದರೆ ಬರಲಿಲ್ಲ. ವರ್ಷಿತಾಳಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ. ಆರೋಪಿಗೆ (Varshita Murder Case) ಗಲ್ಲಿಗೇರಿಸಬೇಕೆಂದು ತಾಯಿ ಜ್ಯೋತಿ ಆಗ್ರಹಿಸಿದರು.
