Chitradurga news | Nammajana.com| 20-8-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರದ (Varshita murder) ಹೊರವಲಯದ ಗೋನೂರು ಬಳಿಯಲ್ಲಿ ವರ್ಷಿತಾ ಮರ್ಡರ್ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ನಮ್ಮ ಕ್ಷೇತ್ರದ ಗೋವೆರಹಟ್ಟಿ ಗ್ರಾಮದ ಯುವತಿ ವರ್ಷಿತಾ ಕೊಲೆಯ ಮಾಹಿಯನ್ನಯ ಅಶೋಕ ಎಂಬ ಹೋಟೆಲ್ (Varshita murder) ನವರು ಮಾಹಿತಿ ನೀಡಿದಾಗ ಶವ ಪತ್ತೆಯಾಗಿದೆ. ನಮ್ಮ ಪೋಲಿಸರು ಮಾಹಿತಿ ಪಡೆದುಕೊಂಡು ನಂತರ ಸ್ಥಳಕ್ಕೆ ತೆರಳಿ ಪರಿಶೀಲಿಸನೆ ನಡೆಸಿ ಈಗಾಗಲೇ ಕ್ರಮ ವಹಿಸಿದ್ದಾರೆ.
ವರ್ಷಿತಾ ಕೊಲೆ ಪ್ರಕರಣದಲ್ಲಿ ಯಾರೇ ಅಪರಾಧ ಮಾಡಿದ್ದರು ಶಿಕ್ಷೆ ಆಗುತ್ತದೆ. ಒಬ್ಬರಾಗಲಿ ಅಥವಾ ಎಷ್ಟೆ ಜನ ಸೇರಿ ಈ ಅಪರಾಧ ಎಸಗಿದ್ದಾರೆ ಎಂಬುದು ತನಿಖೆ ಮುಖಾಂತರ ಹೊರ ಬರಬೇಕಿದೆ ಎಂದು ಸಚಿವರು ತಿಳಿಸಿದರು.
5 ಲಕ್ಷ ಪರಿಹಾರ ಘೋಷಣೆ
ಸರ್ಕಾರದ ಮೂಲಕ 2.50 ಲಕ್ಷ, ಸಚಿವ ಸುಧಾಕರ್ ಅವರು (Varshita murder) ವೈಯಕ್ತಿಕವಾಗಿ 2.50 ಲಕ್ಷ ಸೇರಿ ಸಂತ್ರಸ್ತ ಕುಟುಂಬಕ್ಕೆ ಒಟ್ಟು 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: today Adike Rate : ಅಡಕೆ ಧಾರಣೆ | 20 ಆಗಸ್ಟ್ 2025 | ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಯಲ್ಲಿ 61 ಸಾವಿರ ದಾಟಿದ ಅಡಿಕೆ
ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿನಿ ಕೊಲೆ | ಪೆಟ್ರೋಲ್ ಹಾಕಿ ಸುಟ್ಟಿರುವ ಶಂಕೆ | Chitradurga Murder
