Chitradurga News | Nammajana.com | 30-08-2025
ನಮ್ಮಜನ ನ್ಯೂಸ್ ಕಾಂ, ಚಿತ್ರದುರ್ಗ: ವಿದ್ಯಾರ್ಥಿನಿ(KRS) ವರ್ಷಿತಾಳ ಬರ್ಬರ ಹತ್ಯೆ ಪ್ರಕರಣ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳನ್ನು ತಡೆಯಲು ತನಿಖೆಯನ್ನು ಶೀಘ್ರಗತಿಯಲ್ಲಿ ಮುಗಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕೆಆರ್‌ಎಸ್ ಪಕ್ಷದ ಮಹಿಳಾ ಘಟಕ ನಗರದಲ್ಲಿ ಶುಕ್ರವಾರ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
ರಾಜ್ಯಾಧ್ಯಕ್ಷೆ ಆಶಾ ವಿರೇಶ್ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಚಿತ್ರದುರ್ಗದ 20 ವರ್ಷದ ವರ್ಷಿತಾಳ ಬರ್ಬರಹತ್ಯೆ ಪ್ರಕರಣಬೆಳಕಿಗೆ ಬಂದಿರುವುದು. ಜನರಲ್ಲಿ ಆಕ್ರೋಶ ಹುಟ್ಟಿಸುತ್ತಿದೆ ಎಂದರು.
ಪ್ರತಿನಿತ್ಯ ರಾಜ್ಯದಲ್ಲಿ ಇಂತಹ ಹಲವು ಪ್ರಕರಣಗಳು ನಡೆಯುತ್ತಿದ್ದು, ಹಲವಾರು ಪ್ರಕರಣಗಳನ್ನು ಪೊಲೀಸ್ ಠಾಣಾ ಹಂತದಲ್ಲಿಯೆ ರಾಜಿ ಪಂಚಾಯಿತಿ ನಡೆಸಿ ಮುಕ್ತಾಯ ಮಾಡಲಾಗಿ ಅವುಗಳು ದಾಖಲೆಗೆ ಸಿಗುವುದೆ ಇಲ್ಲ. ಒಬ್ಬ ಮಹಿಳೆ ರಾಜ್ಯದಲ್ಲಿ ಯಾವುದೇ ಭಯವಿಲ್ಲದೇ ಓಡಾಡಲು ಸಾಧ್ಯವಿಲ್ಲ ಅನ್ನುವುದನ್ನು ಚಿತ್ರದುರ್ಗದ ವರ್ಷಿತಾಳ ಪ್ರಕರಣ ಸಾಬೀತು ಪಡಿಸಿದೆ.
ಇದನ್ನೂ ಓದಿ: ಜನನ-ಮರಣ ನೊಂದಣಿ | ನಿರ್ಲಕ್ಷ್ಯ ತೋರಿ ವಿಳಂಬ ಮಾಡುವ ಅಧಿಕಾರಿಗಳು ಅಮಾನತು : ADC ಎಚ್ಚರಿಕೆ
ಇಂತಹ ಪ್ರಕರಣಗಳು ರಾಜ್ಯದಲ್ಲಿ ಸರ್ವೇಸಾಮಾನ್ಯ ಅನ್ನುವ ರೀತಿಯ ವಾತಾವರಣಸೃಷ್ಟಿಯಾಗಿದೆ. ಇದಕ್ಕೆ ಮೂಲ ಕಾರಣವೇನಮ್ಮರಾಜ್ಯದಪೊಲೀಸ್ ವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಟಿರುವುದು. ಪೊಲೀಸ್ ಠಾಣೆಯಲ್ಲಿ ಪೊಲೀಸರು ತಮ್ಮ ಕರ್ತವ್ಯ ಬಿಟ್ಟು ಹಲವಾರು ರೀತಿಯ ಭ್ರಷ್ಟಾಚಾರಗಳಲ್ಲಿ ನಿರತರಾಗಿತಮ್ಮಮೂಲ ಉದ್ದೇಶಗಳನ್ನು ಮರೆತಿರುವುದೇ ಇಂತಹ ಘಟನೆಗಳು ಭಯ ಭೀತಿಯಿಲ್ಲದೇ ನಡೆಯುತ್ತಿರುವುದು.
ಇಂತಹ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಶೀಘ್ರಗತಿಯಲ್ಲಿ ತನಿಖೆ ನಡೆಸಿ, ನ್ಯಾಯ ಕೊಡಿಸುವ ಕೆಲಸ ಮಾಡಿ ಪೊಲೀಸ್ ವ್ಯವಸ್ಥೆಯ ಮೇಲೆ ಹಾಗೂ ಕಾನೂನಿನ ಬಗ್ಗೆ ಜನರಿಗೆ ನಂಬಿಕೆ ಬರುವಂತಹ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ಕಳೆದ ಎರಡುವರೆ ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 43,052 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಭಯ ಹುಟ್ಟಿಸುವ ರೀತಿಯಲ್ಲಿ ಸರಾಸರಿಯಾಗಿ ದಿನಕ್ಕೆ 45 ಪ್ರಕರಣಗಳು(KRS) ದಾಖಲಾಗುತ್ತಿವೆ. ಆ ಈ ರೀತಿಯ ವಾತಾವರಣ ಇರುವ ಪೊಲೀಸ್ ವ್ಯವಸ್ಥೆಯಿಂದ ಸಾರ್ವಜನಿಕರ ರಕ್ಷಣೆ ಸಾಧ್ಯವೇ? ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ಸರ್ಕಾರಗಳು ತುರ್ತಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಹು ದಿನದ ಕನಸು | ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆ
ರಾಜ ಈ ಸಂದರ್ಭದಲ್ಲಿ ವರ್ಷಿತಾಳ ತಾಯಿ, ರಾಜ್ಯ ಕಾರ್ಯಧ್ಯಕ್ಷರಘು ಜಣಗೆರೆ, ರಾಜ್ಯ ಜಂಟಿ ಕಾರ್ಯದರ್ಶಿ ಜೀವನ್, ಯುವಘಟಕ ರಾಜ್ಯಾಧ್ಯಕ್ಷ ಜನನಿ ವತ್ಸಲ, ರಾಜ್ಯ ಕಾರ್ಯದರ್ಶಿ ಹಾಗೂ ಮಹಿಳಾ ಉಸ್ತುವಾರಿ ಇಂದಿರಾ ರೆಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಘು ನಂದನ್, ರಾಜ್ಯ ಸಂಘಟನೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ವೀರಭದ್ರಪ್ಪ, ಕಾರ್ಯನಿರ್ವಾಹಕ ಸಮಿತಿ ಸದಸ್ಯ ಮಹೇಶ್ ನಗರಂಗೆರೆ, ರಾಜ್ಯ ಎಸ್‌ಸಿ/ಎಸ್‌ಟಿ ಘಟಕ ರಾಜ್ಯ ಕಾರ್ಯದರ್ಶಿ ನರಸಿಂಹ ಜಿಲ್ಲಾಧ್ಯಕ್ಷರಾದ ನಾಗರೆಡ್ಡಿ ಬೇಡರೆಡ್ಡಿಹಳ್ಳಿ, ಪ್ರಧಾನ ಕಾರ್ಯದರ್ಶಿ ಬಾಲರಾಜ ಎಸ್ ಯಾದವ್ ಹಾಗೂ ಚಿತ್ರದುರ್ಗ ಜಿಲ್ಲೆಯ ತಾಲೂಕು ಪದಾಧಿಕಾರಿಗಳು ಹಾಗೂ ಬಳ್ಳಾರಿ, ವಿಜಯನಗರ ತುಮಕೂರು ಪದಾಧಿಕಾರಿಗಳು ಹಾಗೂ ಸೈನಿಕರ ಭಾಗವಹಿಸಿದ್ದರು.
