Chitradurga news | nammajana.com | 18-5-2024
ನಮ್ಮಜನ.ಕಾಂ, ಹೊಸದುರ್ಗ: ನಗರದ ವಾಸವಿ ರಸ್ತೆಯಲ್ಲಿನ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಈ ಬಾರಿ ವಿಶೇಷವಾಗಿ ವಾಸವಿ ಜಯಂತಿ (Vasavi Jayanti) ಕಾರ್ಯಕ್ರಮ ತಾಯಿ ಜಗನ್ಮಾತೆಗೆ ವಿಶೇಷ ಅಲಂಕಾರ ಮಾಡುವುದರೊಂದಿಗೆ ವಿಜೃಂಭಣೆಯಾಗಿ ನೆರವೇರಿತು.
4,634 ನೇ ವಾಸವಿ ಜಯಂತಿ ಆಚರಣೆ
ಬೆಳಗ್ಗೆಯಿಂದಲೇ ಅರ್ಚಕರಿಂದ 4,634 ನೇ ವಾಸವಿ ಜಯಂತಿ ಪ್ರಯುಕ್ತ ಹೊಸದುರ್ಗದ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ತಾಯಿಗೆ ನೋಟಿನಲ್ಲಿ, ಚಿಲ್ಲರೆಯಲ್ಲಿ, ನವಧಾನ್ಯಗಳಲ್ಲಿ ಹಾಗೂ ಡ್ರೈ ಫ್ರೂಟ್ಸ್ ನ ಹಾರಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಸಂಜೆ ನಗರದ ಮುಖ್ಯರಸ್ತೆಯಲ್ಲಿ ವಿಶೇಷ ಅಲಂಕಾರ ಮಾಡಿದಂತಹ ವಾಸವಿ ಜಗನ್ಮಾತೆಯನ್ನು ಕುಳ್ಳಿರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ವಾಸವಿ ಜಯಂತಿಯಲ್ಲಿ ಪಾಲ್ಗೊಂಡವರು
ಶ್ರೀ ವಾಸವಿ ಸಮಾಜ, ಶ್ರೀ ವಾಸವಿ ಯುವಜನ ಸಂಘ ಹಾಗೂ ಶ್ರೀ ವಾಸವಿ ಮಹಿಳಾ ಸಂಘ, ಸಂಘದ ಎಲ್ಲಾ ಕಾರ್ಯಕರ್ತರು ಮೆರವಣಿಗೆಯುದ್ದಕ್ಕೂ ಸಾಗಿ ದೇವಿಯ ನಾಮಸ್ಮರಣೆ ಮಾಡಿದರು.
ಇದನ್ನೂ ಓದಿ: Chitradurga: ಚಿತ್ರದುರ್ಗ ಜಿಲ್ಲೆಯ ಮಳೆ ವಿವರ,ಯಾವ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿ, ಹಾನಿಯಾಗಿದೆ ನೋಡಿ
ಉತ್ತಮ ಮಳೆ ಬೆಳೆಗೆ ಪ್ರಾರ್ಥನೆ
ಈ ಬಾರಿ ಹೆಚ್ಚಾಗಿ ಮಳೆ ಬರಲಿ, ನಾಡಿನ ರೈತರಿಗೆ ನೆಮ್ಮದಿ ನೀಡಲಿ ಎಂದು ವಾಸವಿ ಯುವಜನ ಸಂಘದ ಅಧ್ಯಕ್ಷೆ ಸದ್ಗುರು ಪ್ರದೀಪ್ ತಾಯಿ ವಾಸಬಾಂಬೆಗೆ ವಿಶೇಷ ಪೂಜೆ ನೆರವೇರಿಸಿದರು. ಸದ್ಗರು ಪ್ರದೀಪ್ ಅವರು ಕುಟುಂಬದ ಜೊತೆ ಆಗಮಿಸಿ ದೇವರ ಆಶೀರ್ವಾದ ಪಡೆದರು.