Chitradurga news |nammajana.com|21-11-2024
ನಮ್ಮಜನ.ಕಾಂ, ಚಿತ್ರದುರ್ಗ: ವೇದಾಂತ ಸೆಸಾ ಗೋವಾ ಸಂಸ್ಥೆಯಿಂದ ಹೆಚ್ಚಿನ ಮಹಿಳೆಯರಿಗೆ ಉದ್ಯೋಗಾವಕಾಶ (Vedanta Sesa Goa) ಒದಗಿಸುವ ಮೂಲಕ ಉತ್ತಮ ಜೀವ ನಡೆಸಲು ಅನುಕೂಲ ಮಾಡಿಕೊಡುವ ಗಮನಹರಿಸಿದ್ದೇವೆ ಕಡೆಗೆ ಎಂದು ವೇದಾಂತ ಸೆಸಾ ಗೋವಾ ಸಿಇಒ ನವೀನ್ ಜಾಜು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಸೆಸಾ ಟೆಕ್ನಿಕಲ್ ಸ್ಕೂಲ್ನಲ್ಲಿ ತಾಂತ್ರಿಕ ಕೌಶಲ್ಯಗಳು, ವೇದಾಂತ ಟೈಲರಿಂಗ್ ತರಬೇತಿ ಕೇಂದ್ರಗಳ ಮೂಲಕ ವೃತ್ತಿಪರ ಟೈಲರಿಂಗ್ ತರಬೇತಿ, ಕೃಷಿ (Vedanta Sesa Goa) ಉತ್ಪನ್ನ ಹಾಗೂ ಜಾನುವಾರು ಸಾಕಣೆ ಮಾಡಲು ನೆರವಾಗುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಲು ಪ್ರಯತ್ನ ನಡೆಯುತ್ತಿದೆ.
ಕನಸುಗಳಿಗೆ ಬಲ ತುಂಬುವುದು, ಭವಿಷ್ಯವನ್ನು ಸ್ಫೂರ್ತಿದಾಯಕಗೊಳಿಸುವುದು ಎಂಬ ಥೀಮ್ ನಡಿ ಈ ವರ್ಷದ ಮಹಿಳಾ ಉದ್ಯಮಶೀಲತಾ ದಿನ ಆಚರಿಸಲಾಗುತ್ತಿದೆ. ಸಂಸ್ಥೆಯು ಕಳೆದ ಒಂದೂವರೆ ದಶಕದಲ್ಲಿ ಮಹಿಳೆಯಲ್ಲಿ ಉದ್ಯಮಶೀಲತೆ ಮತ್ತು ವೃತ್ತಿಪರ ಕೌಶಲ್ಯಗಳನ್ನು ಕಲಿಸಿಕೊಡುವ ಮೂಲಕ ಅವರ ಕನಸುಗಳನ್ನು ನನಸಾಗಿಸಿ, ಭವಿಷ್ಯವನ್ನು ಸ್ಫೂರ್ತಿದಾಯಕಗೊಳಿಸಲು ನೆರವಾಗುತ್ತಿದೆ. ಸುಸ್ಥಿರ ಉದ್ಯಮ ಸ್ಥಾಪನೆಗೆ ಮತ್ತು ಉದ್ಯೋಗಾವಕಾಶ ದೊರಕಿಸಲು ಸಹಾಯ
ಮಾಡುವ ಮೂಲಕ ಮಹಿಳೆಯರಿಗೆ ಉತ್ತಮ ಮಾರ್ಗ ಹಾಕಿಕೊಟ್ಟು ಅವರನ್ನು ಸಬಲೀಕರಣ ಮಾಡುವ ಗುರಿ ಹೊಂದಲಾಗಿದೆ.
ಸಂಸ್ಥೆಯು ವೃದ್ಧಿ, ಜೀವಿಕಾ, ಆರೋಗ್ಯ, ಗ್ರಾಮ ನಿರ್ಮಾಣ ಮತ್ತು ಪರ್ಯಾಯ ಜೀವನೋಪಾಯ ಯೋಜನೆ ಅವಕಾಶ ಮತ್ತು ‘ಪ್ರಾಜೆಕ್ಟ್ ಆರೋಗ್ಯ’ ಯೋಜನೆಗಳ ಮೂಲಕ 10 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ನೆರವು ನೀಡಲಾಗಿದೆ. ಸಂಸ್ಥೆಯು ದೇಶದ ಐದು ಸರಿಸುಮಾರು 20 ರಾಜ್ಯಗಳ ಸ್ವಸಹಾಯ ಗುಂಪುಗಳಿಗೆ ನೆರವು ಒದಗಿಸಿದೆ. 11 ಸ್ವಸಹಾಯ ಸಂಘಗಳು ಗೋವಾದ (Vedanta Sesa Goa) ಬಿಕೋಲಿಮ್ ಮತ್ತು ಅಮೋನಾ ಪ್ರದೇಶಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಆಗರಬತ್ತಿ ತಯಾರಿಕೆ, ಒಣ ತಿಂಡಿಗಳು, ಅಡುಗೆ ಸೇವೆಗಳು, ಕೇಕ್ ತಯಾರಿ ಮತ್ತು ತೆಂಗಿನಕಾಯಿ ಆಧಾರಿತ ಉತ್ಪನ್ನಗಳಾದ ಜ್ಯೂಸ್ ಮತ್ತು ಎಣ್ಣೆ ತಯಾರಿ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿವೆ ಎಂದಿದ್ದಾರೆ.
ಇದನ್ನೂ ಓದಿ: Dina Bhavishya: ದಿನ ಭವಿಷ್ಯ, ಯಾವ್ಯಾವ ರಾಶಿಗೆ ಶುಭ, ಅಶುಭ?
ಮಹಿಳೆಯರು ಬದಲಾವಣೆಯ ಹರಿಕಾರರು.ಅವರ ಸಾಮರ್ಥ್ಯ ಹಾಗೂ ಕೌಶಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ನಾವು ಈ ಎಲ್ಲಾ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ಸೆಸಾ ಗೋವಾ ಸಿಎಸ್ ಆರ್ ಮುಖ್ಯಸ್ಥ ಲೀನಾ ವೆರೆಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.