Chitradurga news|Nammajana.com|17-9-2025
ನಮ್ಮಜನ.ಕಾಂ, ಚಳ್ಳಕೆರೆ: ವಿಶ್ವಕರ್ಮ ಸಮಾಜದ ಬಂಧುಗಳು ತಮ್ಮದೇಯಾದ ಮೂಲ ವೃತ್ತಿಯಿಂದ ಬದುಕನ್ನು (Vishwakarma) ಕಂಡುಕೊಂಡವರು. ಸಮಾಜದ ಎಲ್ಲಾ ವರ್ಗಗಳೊಂದಿಗೆ ಬೆರೆತು ವಿಶ್ವಾಸವನ್ನು ಗಳಿಸಿ ಮಂಗಳ ಕಾರ್ಯಗಳಿಂದ ಹಿಡಿದು ಎಲ್ಲಾ ಕಾರ್ಯಗಳಲ್ಲೂ ಸಹಕಾರ ನೀಡುತ್ತಾ ಬಂದಿದ್ಧಾರೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲೂ ಸಮಾಜ ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ಬುಧವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿಶ್ವಕರ್ಮ ಸಮಾಜ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ (Vishwakarma) ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಶಿಲ್ಪಕಲೆ ಮತ್ತು ವಾಸ್ತುಶಿಲ್ಪದಲ್ಲಿ ಇಡೀ ವಿಶ್ವವೇ ಬೆರಗಾಗುವಂತಹ ಅಮೂಲ್ಯವಾದ ಕಾಣಿಕೆ ನೀಡಿದ ವಿಶ್ವಕರ್ಮರು ಕಲೆಯ ಮೂಲಕ ಪ್ರಸಿದ್ದರಾದವರು.ಆದರ್ಶಗಳು ಎಲ್ಲರಿಗೂ ಸದಾಕಾಲ ಸ್ಪೂರ್ತಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ರೇಹಾನ್‌ಪಾಷ, ವಿಶ್ವಕರ್ಮರು ನೀಡಿದ ಕೊಡುಗೆ ಬಗ್ಗೆ ಸರ್ಕಾರ ಪ್ರತಿವರ್ಷ ಜಯಂತಿ ಆಚರಣೆ ಮೂಲಕ ಸ್ಮರಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ. ವಿಶ್ವಕರ್ಮ ಸಮಾಜದ ಬಂಧುಗಳು ಕಲೆಯ ಆರಾಧಕರು ಎಂದರು.
ಇದನ್ನೂ ಓದಿ: HIRIYUR : ಚಲಿಸುತ್ತಿದ್ದ ಕಾರಿಗೆ ಬೆಂಕಿ | ಕಾರು ಚಾಲಕ ಸಾವು
ನಗರಸಭೆ ಅಧ್ಯಕ್ಷೆ ಬಿ.ಶಿಲ್ಪ, ಉಪಾಧ್ಯಕ್ಷೆ ಕವಿತಾವೀರೇಶ್, ಸದಸ್ಯರಾದ ಆರ್.ಮಂಜುಳಾ, ಸುಮಭರಮಣ್ಣ, ಕವಿತಾಬೋರಯ್ಯ, ಅಧ್ಯಕ್ಷ ಎನ್.ಚಂದ್ರಶೇಖರಚಾರ್, ಉಪಾಧ್ಯಕ್ಷ ವೈ.ನಾಗರಾಜು, ಯುವಘಟಕದಅಧ್ಯಕ್ಷ ಬಿ.ಎಸ್.ಸೀತಾರಾಮಚಾರ್, ಸಹ ಕಾರ್ಯದರ್ಶಿ ಭರತ್‌ಕುಮಾರ್, ಖಜಾಂಚಿ ಜಿ.ಪಿ.ಪದ್ಮನಾಭಚಾರ್, (Vishwakarma) ವಿಶ್ವಕರ್ಮಪರಿಷತ್ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಎಂ.ರವೀಶ್, ಮಾಜಿ ಅಧ್ಯಕ್ಷ ವೆಂಕಟೇಶ್‌ಚಾರ್, ಬಿಎನ್‌ಜಿ ವೆಂಕಟೇಶ್, ಮಹಿಳಾ ಘಟಕದ ಅಧ್ಯಕ್ಷೆ ಉಮಾದೇವಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷ ಕಮಲಮ್ಮ, ಸರಸ್ವತಿ, ಎಂ.ಸುಮ, ಸುಮಲತ, ರಾಜೇಶ್ವರಿ, ಸಿ.ಇ.ಪ್ರಸನ್ನಕುಮಾರ್, ಜಯವೀರಚಾರಿ, ಶ್ರೀನಿವಾಸ್‌ಚಾರ್, ಡಿ.ಶಿವಕುಮಾರ್, ರಾಜೇಂದ್ರಚಾರ್ ಮುಂತಾದವರು ಉಪಸ್ಥಿತರಿದ್ದರು.
