Chitradurga news|nammajana.com|13-8-2024
ನಮ್ಮಜನ.ಕಾಂ, ಹಿರಿಯೂರು: ತಾಲೂಕಿನ ವಿವಿ ಪುರ ಗ್ರಾಪಂ ವ್ಯಾಪ್ತಿಯ ಭರಮಗಿರಿಯಲ್ಲಿ ಗುಡಿಹಳ್ಳಿ, ಗೌನಹಳ್ಳಿ, (VV Pura Bandh) ಬೀರೇನಹಳ್ಳಿ, ಜಾಲಿಕಟ್ಟೆ, ಕೂನಿಕೆರೆ ಮತ್ತು ತವಂದಿ ಕೆರೆಗಳಿಗೆ ನೀರು ತುಂಬಿಸಬೇಕು ಆಗ್ರಹಿಸಿ ಸ್ಥಳೀಯ ರೈತ ಮುಖಂಡರು ಸಭೆ ನಡೆಸಿದರು.
ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ, ವಿವಿ ಸಾಗರ ಜಲಾಶಯ ಸಮೀಪವಿದ್ದರೂ ಸಹ ಅಂತರ್ಜಲದ ಲಭ್ಯತೆ ಇಲ್ಲದ ದುರದೃಷ್ಟ ಇಲ್ಲಿನವರದ್ದು. ಈ ಭಾಗದ ಎಲ್ಲಾ ಕೆರೆಗಳು ಬತ್ತಿ ಹೋಗಿ ಕುಡಿಯುವ ನೀರಿಗೂ ಸಹ ಹಾಹಾಕಾರ ಉಂಟಾಗಿದ್ದು, ಟ್ಯಾಂಕರ್ ಮೂಲಕ (VV Pura Bandh) ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ತೋಟಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ ಎಂದರು.

ಈ ಭಾಗದ ಕೆರೆಗಳನ್ನು ತುಂಬಿಸಲು ಪ್ರತಿ ಹಳ್ಳಿಯಿಂದಲೂ ರೈತರು ಸಂಘಟಿತರಾಗಿ ಗಟ್ಟಿಯಾದ ಹೋರಾಟ, ಚಳವಳಿ ರೂಪಿಸಿ ಸರ್ಕಾರದ ಗಮನ ಸೆಳೆಯಬೇಕಿದೆ. ನಮ್ಮ ಕೆರೆಗಳಿಗೆ ನೀರು ತುಂಬಿಸುವವರೆಗೂ ನಿರಂತರ ಚಳವಳಿ ಮಾಡುವ (VV Pura Bandh) ಅನಿವಾರ್ಯತೆ ಇದೆ. ಜೊತೆಗೆ ವಾಣಿವಿಲಾಸ ಜಲಾಶಯಕ್ಕೆ ಪ್ರತಿ ವರ್ಷ 10 ಟಿಎಂಸಿ ನೀರು ಹರಿಸಬೇಕು ಮತ್ತು ಕೇಂದ್ರ ಸರ್ಕಾರ ಘೋಷಣೆ ಮಾಡಿದಂತೆ 5300 ಕೋಟಿ ಹಣ ಬಿಡುಗಡೆ ಮಾಡಬೇಕು.
ಈ ಎಲ್ಲಾಒತ್ತಾಯಗಳನ್ನು ಈಡೇರಿಸುವವರೆಗೂ ನಿರಂತರ ಹೋರಾಟ ರೂಪಿಸೋಣ ಎಂದರು. ಎಲ್ಲರ ಒಮ್ಮತದ ನಿರ್ಧಾರದಂತೆ ಆ.21ರಂದು ವಿವಿ ಪುರ ಬಂದ್ ಮಾಡಿ (VV Pura Bandh) ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಲಾಯಿತು.
ಇದನ್ನೂ ಓದಿ: Adike Rate |12 ಆಗಸ್ಟ್ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ ?
ಈವೇಳೆ ಬಳಗಟ್ಟವೆಂಕಟೇಶ್, ತಿಮ್ಮಯ್ಯ, ಭೂತಯ್ಯ, ಅಮ್ಮನಹಟ್ಟಿಯ ಬಸವರಾಜ್, ಪೆರಿಸ್ವಾಮಿ, ಭರಮಗಿರಿ ಲೋಕೇಶ್, ವೀರಭದ್ರಪ್ಪ, ಶಿವಣ್ಣ, ಕೆಂಚಪ್ಪ, ಕಾಂತರಾಜ್, ಮಂಜುನಾಥ್, ಗೌನಹಳ್ಳಿ ಶಾಂತಕುಮಾರ್, ಶಿವಣ್ಣ, (VV Pura Bandh) ಹನುಮಂತಪ್ಪ, ಮಹಾಲಿಂಗಪ್ಪ, ಭೂತೇಶ್, ಪೂಜಾರಪ್ಪ, ಭೀಮಯ್ಯ ಮುಂತಾದವರು ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252