Chitradurga news | nammajana.com |9-9-2024
ನಮ್ಮಜನ.ಕಾಂ, ಚಿತ್ರದುರ್ಗ: ತಾಲೂಕಿನ ವಿವಿ ಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳ ಕೆರೆಗಳಿಗೆ ನೀರು ಹರಿಸಲು (VV Sagar Dam) ಆಗ್ರಹಿಸಿ ವಿವಿ ಪುರದಿಂದ ತಾಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಲು ರೈತ ಸಂಘದಿಂದ ಬೀರೇನಹಳ್ಳಿಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯನ್ನು ಉದ್ದೇಶಿಸಿ ರೈತಸಂಘದ ತಾಲೂಕು ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ತಾಲೂಕಿನ ಭರಮಗಿರಿ, ಗೌನಹಳ್ಳಿ, ಗುಡಿಹಳ್ಳಿ, ಬೀರೇನಹಳ್ಳಿ, ಕೂನಿಕೆರೆ ಹಾಗೂ ತವಂದಿ ಗ್ರಾಮದ ಕೆರೆಗಳಿಗೆ ವಾಣಿ ವಿಲಾಸಜಲಾಶಯದಿಂದ ನೀರು (VV Sagar Dam) ತುಂಬಿಸಬೇಕು ಎಂದು ಒತ್ತಾಯಿಸಿ ಈಗಾಗಲೇ ವಿವಿ ಪುರ ಬಂದ್ ಮಾಡಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸ ಲಾಗಿತ್ತು. ಇದುವರೆಗೂ ಇದರ ಬಗ್ಗೆ ಗಮನ ಹರಿಸದೇ ರೈತರನ್ನು ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.

ತಾಲೂಕಿನ ಬೀರೇನಹಳ್ಳಿಯಲ್ಲಿ ವಿವಿ ಪುರ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸುವ ವಿಚಾರವಾಗಿ ಸಭೆ ನಡೆಸಿ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಯಿತು.
ಆದ್ದರಿಂದರೈತರಚಳುವಳಿಯನ್ನುತೀವ್ರಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಸೆ.21ರ ಶನಿವಾರ ಬೆಳಿಗ್ಗೆ 9 ಗಂಟೆಗೆ ವಿವಿ ಪುರದ ಕಣಿವೆ ಮಾರಮ್ಮ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭಿಸಿ, ಹಿರಿಯೂರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ತಲುಪಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ 30 ಟಿಎಂಸಿ ನೀರು ಸಂಗ್ರಹವಾಗುವ ವಾಣಿವಿಲಾಸ ಜಲಾಶಯವಿದ್ದರೂ ಸಹ ನಮ್ಮ ತಾಲೂಕಿನ ರೈತರಿಗೆ ನೀರು ಇಲ್ಲದೆ ತೋಟಗಳು ಒಣಗುತ್ತಿವೆ. ಕುಡಿಯಲು ಸಹ ನೀರಿನ ಅಭಾವ
ಉಂಟಾಗಿಟ್ಯಾಂಕರ್‌ಮೂಲಕನೀರುತರುವಂತಾಗಿದೆ. ಹಾಗಾಗಿ ರೈತರು ತಮ್ಮ ಬದುಕುಗಳನ್ನು ಬಿಟ್ಟು ಹೋರಾಟ ನಡೆಸುತ್ತಿದ್ದರೆ ಸರ್ಕಾರ ಕಣ್ಣು ಮುಚ್ಚಿ ಕೂತಿದೆ.ಇದು ರೈತ ವಿರೋಧಿ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಪಾದಯಾತ್ರೆಗೆ ಪ್ರತಿ ಹಳ್ಳಿಯಿಂದಲೂ ಮಹಿಳೆಯರು, ರೈತರು ತಂಡೋಪತಂಡವಾಗಿ ಬಂದು ಸೇರಬೇಕು ಎಂದು ಮನವಿ ಮಾಡಿದರು ಸಂಘದ ಕಾರ್ಯದರ್ಶಿ ಸಿದ್ದರಾಮಣ್ಣ ಮಾತನಾಡಿ, ತಾಲೂಕಿನಲ್ಲಿ ಇವು ಅತಿ ಹಿಂದುಳಿದ ಗ್ರಾಮಗಳಾಗಿದ್ದು, ಈ ಭಾಗದ ರೈತರುಜೀವನ ನಡೆಸುವುದು ಕಷ್ಟಕರವಾಗಿದೆ. ಇಲ್ಲಿ ಕೆರೆಗಳೆಲ್ಲಾ ಬತ್ತಿ ಹೋಗಿ ಅಂತರ್ಜಲ ಸಂಪೂರ್ಣ ಕುಸಿತವಾಗಿದೆ. ರೈತರು ಸಂಘಟಿತರಾಗಿ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ರೈತ ಮುಖಂಡ ಪಿಜೆ. ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರ ಕೂಡಲೇ ರೈತರಿಗೆ ಸ್ಪಂದಿಸಬೇಕು. ಈ ಭಾಗಕ್ಕೆ ನೀರು ಹರಿಸುವ ಕೆಲಸಕ್ಕೆ ಡಿಪಿಆರ್‌ರೆಡಿ ಮಾಡಿ ಸರ್ಕಾರದಿಂದ (VV Sagar Dam) ಹಣಮಂಜೂರಾತಿ ಮಾಡಿಕಾಮಗಾರಿ ಮುಗಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಪೂಜೆ ಮಾಡಿದರೆ ಹಣ ಡಬಲ್ ! ಚಿತ್ರದುರ್ಗದ ಸ್ವಾಮೀಜಿ ಅರೆಸ್ಟ್ | Money fraud
ಈ ಸಂದರ್ಭದಲ್ಲಿ ಬೀರೇನಹಳ್ಳಿ ರಾಮಯ್ಯ, ಪುಟ್ಟಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶಯ್ಯ, ಪಾಂಡಪ್ಪ, ಪಾರ್ವತೇಶ್, ರಾಜಪ್ಪ, ಪಾಂಡುರಂಗಪ್ಪ, ಅರುಣ್, ಕಿರಣ್, ಗೌಡ್ರು ಶಿವಣ್ಣ, ತಿಮ್ಮಣ್ಣ, ಭೂತಾಭೋವಿ ಮುಂತಾದವರು ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252