Chitradurga news | nammajana.com | 24-5-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಗೆ ದಿಢೀರ್ ಭೇಟಿ ನೀಡಿದ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಮಕ್ಕಳು ವಾರ್ಡನ್ ಶಿಲ್ಪ ವಿರುದ್ಧ ಸಾಲು ಸಾಲು ಆರೋಪ ಮಾಡಿದ ಹಿನ್ನಲೆ ವಾರ್ಡನ್ ಸಸ್ಪೆಂಡ್ (Warden suspended) ಮಾಡಲು ಸಚಿವ ಜಮೀರ್ ಅಹಮ್ಮದ್ ಸೂಚಿಸಿದ್ದಾರೆ.
ಬೆಂಗಳೂರಿಗೆ ತೆರಳುವ ವೇಳೆ ನಗರದ ಕಲಾ ಕಾಲೇಜು ಹಿಂಬಾಗದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ
ಹಾಸ್ಟೆಲ್ ಗೆ ದಿಢೀರ್ ಬೇಟಿ ನೀಡಿದ ಸಚಿವರು ಹಾಸ್ಟೆಲ್ (Warden suspended) ಸಮಸ್ಯೆ ಕಂಡು ಶಾಕ್ ಆಗಿದ್ದಾರೆ.
ಮಕ್ಕಳು ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ಎಳೆ ಎಳೆಯಾಗಿ ಸಚಿವರ ಮುಂದೆ ಬಿಚ್ಚಿಟ್ಟಿದ್ದು ಸಚಿವರಿಗೆ ಮನದಟ್ಟಾಗಿದೆ.
ಹಾಸ್ಟೆಲ್ ನಲ್ಲಿ ತರಕಾರಿ ಇಲ್ಲದ ಊಟ ನೀಡಿದ ಆರೋಪ ಮಾಡಿದ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಆರೋಪ ಕೇಳಿ ವಾರ್ಡನ್ ಗೆ (Warden suspended) ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಲ್ಪಸಂಖ್ಯಾತ ಕಲ್ಯಾಣಧಿಕಾರಿಗೆ ಫೋನ್ ಕಾಲ್ ಮಾಡಿ ವಾರ್ಡನ್ ಸಸ್ಪೆಂಡ್ ಗೆ ಸೂಚನೆ (Warden suspended)
ಸಚಿವ ಜಮೀರ್ ಅಹಮದ್ ಅವರು ಫೋನ್ ಮೂಲಕ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿ ವಾರ್ಡನ್ ಶಿಲ್ಪ ಅವರನ್ನು ಸಸ್ಪೆಂಡ್ (Warden suspended) ಮಾಡಲು ಸಚಿವ ಜಮೀರ್ ಅಹಮದ್ ಖಾನ್ ಕ್ರಮ ಜರುಗಿಸಿದ್ದಾರೆ.
ಇದನ್ನೂ ಓದಿ: Dina Bhavishya: ಇಂದಿನ ರಾಶಿ ಭವಿಷ್ಯ 24-5-2024
ಮಕ್ಕಳಿಗೆ ಸಚಿವ ಜಮೀರ್ ಅಭಯ (Warden suspended)
ಹಾಸ್ಟೆಲ್ ನಲ್ಲಿ ಇನ್ನೊಮ್ಮೆ ಅವ್ಯವಸ್ಥೆ ಮರುಕಳಿಸದಂತೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ, ನೀವು ಧೈರ್ಯವಾಗಿರಿ ಎಂದು ಸಚಿವ ಜಮೀರ್ ಮಕ್ಕಳಿಗೆ ಭರವಸೆ ನೀಡಿದ್ದಾರೆ. ವಾರ್ಡನ್ ಶಿಲ್ಪ ಸಸ್ಪೆಂಡ್ (Warden suspended) ಉಳಿದ ಇಲಾಖೆ ಮತ್ತು ಹಾಸ್ಟೆಲ್ ವಾರ್ಡನ್ ಗಳು ಎಚ್ಚರ ವಹಿಸುತ್ತಾರಾ ಕಾದು ನೋಡಬೇಕು.
ಈ ಸಂದರ್ಭದಲ್ಲಿ ಸಚಿವ ಜಮೀರ್ ಜೊತೆ ಚಿತ್ರದುರ್ಗ ಶಾಸಕ ಕೆ.ಸಿ ವೀರೇಂದ್ರ ಸಾಥ್ ನೀಡಿದ್ದಾರೆ.