Chitradurga news|nammajana.com|29-6-2024
ನಮ್ಮಜನ.ಕಾಂ, ಹಿರಿಯೂರು: ವಿವಿ ಸಾಗರದ ನೀರನ್ನು ವೇದಾವತಿ ನದಿ ಮೂಲಕ ಧರ್ಮಪುರ ಹೋಬಳಿಯ ಎಂಟು ಕೆರೆಗಳಿಗೆ ನೀರು ಹರಿಸುವ (Water flowed into Dharmapura Lake) ಕಾಮಗಾರಿ ಮುಂದುವರಿದ ಭಾಗವಾಗಿ ಶುಕ್ರವಾರ ಧರ್ಮಪುರ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಯಿತು.
ಇದು 90 ಕೋಟಿ ವೆಚ್ಚದ ಧರ್ಮಪುರ ಏತ ನೀರಾವರಿ ಯೋಜನೆಗೆ 2022ರಲ್ಲಿ ರಲ್ಲಿ ಸಿಎಂ ಆಗಿದ್ದ ಬಸವರಾಜ್ ಬೊಮ್ಮಯಿ ಹೊಸಹಳ್ಳಿ ಸಮೀಪದ ವೇದಾವತಿ ನದಿ ಬಳಿ ಈ ಯೋಜನೆಗೆ ಚಾಲನೆ ನೀಡಿದ್ದರು. ವೇದಾವತಿ ನದಿ (Water flowed into Dharmapura Lake) ಮೂಲಕ ವಿವಿ ಸಾಗರದ ನೀರನ್ನು ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿಗೆ ಹರಿಸಿದ್ದರಿಂದ ಮತ್ತು ವೇದಾವತಿ ಒಡಲಲ್ಲಿ ಅಲ್ಲಲ್ಲಿ ಚೆಕ್ ಡ್ಯಾಮ್ ನಿರ್ಮಾಣದಿಂದ ನೀರಿನ ಸಂಗ್ರಹವಿದ್ದು ಕೆರೆಗಳಿಗೆ ಕುಡಿಯುವ ನೀರು ಹರಿಸುವ ಯೋಜನೆ ಫಲಪ್ರದವಾಗಿದೆ.

ಇದನ್ನೂ ಓದಿ: ದೇಹದ ತೂಕವನ್ನು ಕಡಿಮೆ ಮಾಡಲು ಇಲ್ಲಿದೆ 10 ಟಿಪ್ಸ್ | Health Tips
ಧರ್ಮಪುರ ಹೋಬಳಿ ಜನತೆ ಹಾಗೂ ರೈತಸಂಘದ (Water flowed into Dharmapura Lake) ಕಾರ್ಯಕರ್ತರ ಹೋರಾಟದ ಫಲವೆಂಬಂತೆ ಶುಕ್ರವಾರ ಧರ್ಮಪುರ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿದಿದ್ದು ಹೋಬಳಿ ಜನರ ಸಂತಸಗೊಂಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252