Chitradurga News | Nammajana.com 07-08-2025
ನಮ್ಮಜನ.ಕಾಂ,ಹಿರಿಯೂರು: ರಾಷ್ಟ್ರೀಯ(underpass) ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಐಆರ್ ಬಿ ಕಂಪನಿಯ ಕಾಮಗಾರಿ ನಿರ್ವಹಣೆಯ ನಿರ್ಲಕ್ಷತೆಯ ಬಗ್ಗೆ ಅವಧಾನಿ ನಗರದ ಎಲ್ ಹೆಚ್ ಬಸವರಾಜ್ ರವರು ಹಿರಿಯೂರು ಗ್ರಾಮಾoತರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

ದೂರುದಾರರು ಪಟ್ರೆಹಳ್ಳಿ ಬಳಿಯ ಅಂಡರ್ ಪಾಸ್ ಮೂಲಕ ಮಂಗಳವಾರ ಬೆಳಿಗ್ಗೆ ಅಸೆಂಟ್ ಪಿಯು ಕಾಲೇಜ್ ಗೆ ಹೋಗುವಾಗ ಅಂಡರ್ ಪಾಸ್ ತುಂಬಾ ನೀರು ನಿಂತಿದ್ದು, ಕಾರು ಮುಂದೆ ಸಾಗಲು ಆಗದೇ ಅರ್ಧ ಮುಳುಗಿ ಹೋಗಿದ್ದು ಸ್ಥಳೀಯರ ನೆರವಿನಿಂದ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದು ಅಂತಹ ಅಪಾಯಕಾರಿ ಸ್ಥಳದಲ್ಲಿ ಯಾವುದೇ ರೀತಿಯ ಎಚ್ಚರಿಕೆ ಫಲಕ, ಬ್ಯಾರಿಕೇಡ್ ಹಾಕಿಲ್ಲ ಎಂದು ದೂರಿದ್ದಾರೆ.
ಮಳೆ ಬಂದಂತ ಸಮಯದಲ್ಲಿ ನೀರು ನಿಂತು ಇನ್ನಷ್ಟು ಅಪಾಯಕಾರಿ ಆಗುವ ಈ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಗಳು ಇರುವುದಿಲ್ಲ. ರಾತ್ರಿ ವೇಳೆ ಬೆಳಕಿನ ವ್ಯವಸ್ಥೆಯೂ ಇರುವುದಿಲ್ಲ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(underpass) ಕಾನೂನುಗಳನ್ನು ಇಲ್ಲಿ ಸ್ಪಷ್ಟವಾಗಿ ಉಲ್ಲoಘಿಸಿದ್ದು ಈಗಾಗಲೇ ಇಂತಹ ಪ್ರಕರಣಗಳು ನಡೆದರು ಸಹ ಯಾವುದೇ ಮುಂಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳದ ಎನ್ ಹೆಚ್ ಎಐ ಮತ್ತು ಅದರ ನಿರ್ವಹಣೆಯ ಹೊಣೆ ಹೊತ್ತಿರುವ ಐಆರ್ ಬಿ ಕಂಪನಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ದಾಖಲಿಸಿದ್ದಾರೆ.
ಇದನ್ನು ಓದಿ: ಆಗಸ್ಟ್ 15 ರಿಂದ ಎಂಡೊಸ್ಕೋಫಿ ಮತ್ತು ಸ್ತನಕ್ಯಾನ್ಸರ್ ಚಿಕಿತ್ಸೆ ಘಟಕ ಆರಂಭ
ಚಿತ್ರ 1,ತಾಲೂಕಿನ ಪಟ್ರೆಹಳ್ಳಿ ಬಳಿಯ ಅಂಡರ್ ಪಾಸ್ ನಲ್ಲಿ ನೀರು ತುಂಬಿದ್ದು ಕಾರು ಮುಳುಗಿರುವುದು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252