Chitradurga news |nammajana.com |19-5-2024
ವಿಶೇಷ ವರದಿ: ಮಹಂತೇಶ್ ಮೊಳಕಾಲ್ಮುರು
ನಮ್ಮಜನ.ಕಾಂ, ಮೊಳಕಾಲ್ಮುರು: ನೀರಿಗದೆಷ್ಟು ಲಾಲಿತ್ಯವಿದೆಯಲ್ಲ ಎಂದು ಅನಿಸುವುದೇ! ಜಲಪಾತಗಳನ್ನು (Waterfall) ನೋಡುವಾಗ.ಜಲಪಾತಗಳ ಮೋಹಕತೆ ಇರುವುದೇ ಮಳೆ ಬಂದಾಗ ಅನೇಕ ಭಾಗಗಳಲ್ಲಿ ಜನಪ್ರಿಯ ಜಲಪಾತಗಳನ್ನು ನೋಡುವುದು ಸಾಮಾನ್ಯ, ಆದ್ರೆ ಸತತ ಬರಗಾಲಕ್ಕೆ ತುತ್ತಾಗುವ ತಾಲೂಕಿನಲ್ಲಿ ಜಲಪಾತ ನೋಡುವುದೇ ವಿಶೇಷ!
ಬರದ ನಾಡಿನ ಜನರಿಗೆ ಅಪರೂಪದ ಜಲಪಾತ(Waterfall)
ಈ ವರ್ಷದ ಬರಗಾಲದಿಂದ ತತ್ತರಿಸಿ ಹೋದ ತಾಲೂಕಿನ ಜನರಿಗೆ ಬರದ ನಾಡಿನಲ್ಲಿ ಜಲಪಾತವು (Waterfall) ಹಾಲಿನಂತೆ ಸಮೃದ್ಧಿಯಾಗಿ ದುಮ್ಮಿಕ್ಕಿ ಹರಿಯುತ್ತಿದೆ.

ಹೌದು..ತಾಲ್ಲೂಕಿನ ಮೇಲಿನಕಣಿವೆ ಸಮೀಪದ ಕೃಷ್ಣರಾಜಪುರ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಇಂದು ಸುರಿದ ಬಾರಿ ಮಳೆಗೆ ದೊಡ್ಡ ಪ್ರಮಾಣದ ಜಲಪಾತ ಸೃಷ್ಟಿಯಾಗಿದೆ.
ಬಾಂಡ್ರಾವಿ ಮಾರ್ಗ ಬೆಟ್ಟದ ಸಾಲಿನಲ್ಲಿ ಜಲಪಾತ
ರಾಂಪುರದಿಂದ ಬಾಂಡ್ರಾವಿಗೆ ಹೋಗುವ ಮಾರ್ಗದಲ್ಲಿ ಎಡಬದಿಯ ಬೆಟ್ಟದ ಮೇಲೆ ಈ ಜಲಪಾತವನ್ನು ಕಾಣಬಹುದಾಗಿದೆ. ಬೆಟ್ಟದ ಹಿಂಭಾಗದಲ್ಲಿರುವ ಕೃಷ್ಣರಾಜಪುರ ಕಾಯ್ದಿಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಇಂದು ಉತ್ತಮ ಮಳೆಯಾಗುತ್ತಿದ್ದು ಜಲಪಾತ ಸೃಷ್ಟಿಯಾಗಿದೆ.
ಇದನ್ನೂ ಓದಿ: Dina Bhavishya: ಇಂದಿನ ರಾಶಿ ಭವಿಷ್ಯ-19-5-2024
2022 ರಲ್ಲಿ ಕಾಣಿಸಿಕೊಂಡಿದ್ದ ಜಲಪಾತ (Waterfall)
ಬರಕ್ಕೆ ಹೆಸರಾಗಿರುವ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಇಲ್ಲಿ ಹೊರತುಪಡಿಸಿದಲ್ಲಿ ಬೇರೆ ಎಲ್ಲಿಯೂ ಇಂತಹ ಜಲಪಾತ ನೋಡಲು ಸಿಗುವುದಿಲ್ಲ. 2022ರ ವರ್ಷದಲ್ಲಿ ಕಾಣಿಸಿಕೊಂಡಿದ್ದ ಜಲಪಾತವು (Waterfall) ಕಳೆದ ವರ್ಷ ಮಳೆ ಬಾರದ ಕಾರಣ ಕಣ್ಮರೆಯಾಗಿತ್ತು, ಆದ್ರೆ ಇದೀಗ ಮಳೆಗಾಲದ ಮುನ್ನವೇ ಜಲಪಾತ ಸೃಷ್ಟಿಯಾಗಿದ್ದು ಜನರಿಗೆ ಇನ್ನಿಲ್ಲದ ಸಂತಸ ತಂದಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252