Chitradurga news|nammajana.com|7-8-2024
ವಿಶೇಷ ವರದಿ: ಚಳ್ಳಕೆರೆ ವೀರೇಶ್
ನಮ್ಮಜನ.ಕಾಂ, ಚಳ್ಳಕೆರೆ: ಕೇರಳದ ವಯನಾಡಿನಲ್ಲಿ ಕಳೆದ ವಾರ ನಡೆದ ಪ್ರಕೃತಿವಿಕೋಪದಲ್ಲಿ ಕಂಡುಕೇಳರಿದಂತಹ (Wayanad DC Meghashree) ದುರಂತ ನಡೆದಿದೆ. ಈ ದುರಂತದ ಪರಿಸ್ಥಿತಿಯನ್ನು ನಿಬಾಯಿಸುವ ಹೊಣೆಗಾರಿಕೆ ಕನ್ನಡತಿ, ಚಳ್ಳಕೆರೆಯ ಮಗಳು, ವಯನಾಡು ಜಿಲ್ಲಾಧಿಕಾರಿ ಮೇಘಶ್ರೀ ಯಶಸ್ವಿಯಾಗಿ ನಿಬಾಯುಸಿದ ಹೆಮ್ಮೆ ಕನ್ನಡಿಗರದ್ದು.
ನಿವೃತ್ತ ಬ್ಯಾಂಕ್ ಅಧಿಕಾರಿ ಮಗಳು ಮೇಘಶ್ರೀ
ತಾಲ್ಲೂಕಿನ ನಿವೃತ್ತ ಬ್ಯಾಂಕ್ ಆಧಿಕಾರಿ ಎಸ್.ರುದ್ರಮುನಿಯಪ್ಪ, ಶಿಕ್ಷಕಿ ರುಕ್ಮಿಣಿದೇವಿಯ ಪುತ್ರಿಯಾದ ಮೇಘಶ್ರೀ ತಾಲ್ಲೂಕಿನ ದೊಡ್ಡೇರಿ ಗ್ರಾಮದ ಮಗಳು. ಚಳ್ಳಕೆರೆ ತಾಲ್ಲೂಕಿನಲ್ಲಿ ತಮ್ಮ (Wayanad DC Meghashree) ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿದವರು. ಬೆಂಗಳೂರಿನಲ್ಲಿ ಪಿಯುಸಿವಿದ್ಯಾಭ್ಯಾಸ ಪೂರೈಸಿದ ಅವರ ಇಂಜಿನಿಯರಿಂಗ್ ಪದವಿ ಪಡೆದ ಬೆಂಗಳೂರು ಖಾಸಗಿ ಪಂಕನಿಯಲ್ಲಿ ಕೆಲಸ ಪ್ರಾರಂಭಿಸಿದರು.
ಚಿಕ್ಕಂದಿನಿಂದಲೂ ಸಾರ್ವಜನಿಕ ಸೇವೆ ಮಾಡಬೇಕೆಂಬ ಕನಸು ಹೊತ್ತಿದ್ದ ಅವರು ೨೦೧೬ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಜಿಲ್ಲಾಧಿಕಾರಿಯಾಗಿ ಆಯ್ಕೆಯಾದರು.
15 ದಿನಗಳ ಹಿಂದೆ ಡಿಸಿಯಾಗಿ ಅಧಿಕಾರ ಸ್ವೀಕಾರ
ಕಳೆದ ವಾರ ಸಂಭವಿಸಿದ ವಯನಾಡು ಗುಡ್ಡ ಕುಸಿತ ಘಟನೆ ಸಂಭವಿಸುವ ೧೦-೧೫ ದಿನಗಳ ಹಿಂದೆ ಅಧಿಕಾರವಹಿಸಿಕೊಂಡ (Wayanad DC Meghashree) ಚಳ್ಳಕೆರೆಯ ಪುತ್ರಿ ಮೇಘಶ್ರೀ ಘಟನೆಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಗಲು, ರಾತ್ರಿ ಎನ್ನದೆ ಮಣ್ಣಿನಲ್ಲಿ ಕಣ್ಮರೆಯವರನ್ನು ಹುಡುಕಿಸುತ್ತಿದ್ದಾರೆ. ದುರಂತ ನಡೆದ ದಿನದಿಂದಲ್ಲೂ ತಮ್ಮ ಘಟನೆ ನಡೆದ ಸ್ಥಳದಲ್ಲೇ ಮೊಕ್ಕಾಂ ಮಾಡಿ (Wayanad DC Meghashree) ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿಯಾಗಿ ಆಗಮಿಸಿದ ಕೆಲವೇ ದಿನಗಳಲ್ಲಿ ಅವರು ಅತಿ ದೊಡ್ಡ ಸವಾಲು ಎದುರಿಸಿದ ಚಳ್ಳಕೆರೆ ಪತ್ರಿಯ ಕಾರ್ಯ ಮೆಚ್ಚುವಂತದ್ದು.
ಇದನ್ನೂ ಓದಿ: Dina Bhavishya: ದಿನ ಭವಿಷ್ಯ 7-8-2024
ತಂದೆ ಚಳ್ಳಕೆರೆಯಲ್ಲಿ ಬ್ಯಾಂಕ್ ಅಧಿಕಾರಿಯಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದ ಅವರು, ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ಧಾರೆ. ನಂತರ ತಮ್ಮ ಗ್ರಾಮದ ಜಮೀನಿನಲ್ಲಿ ಕೃಷಿ (Wayanad DC Meghashree) ಚಟುವಟಿಕೆಯಲ್ಲಿ ತೊಡಗಿಕೊಂಡಿದ್ಧಾರೆ. ಮೇಘಶ್ರೀತಾಯಿ ರುಕ್ಮುಣಿದೇವಿಯೂ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ಧಾರೆ.
ಜುಲೈ 30 ರಂದು ವಯನಾಡುನಲ್ಲಿ ಈ ಭೀಕರ ದುರಂತ ನಡೆದಿದೆ. ನಾನು ಒಂದು ದಿನ ಮೊದಲು ನನ್ನ ಮಗಳು,(Wayanad DC Meghashree) ಮೊಮಕ್ಕಳೊಂದಿಗೆ ಇದ್ದು ಜುಲೈ 29 ರ ಬೆಳಗ್ಗೆ ಬೆಂಗಳೂರಿಗೆ ವಾಪಾಸ್ ಆಗಿದ್ದೆ. ಸುದ್ದಿ ಮಾದ್ಯಮಗಳಲ್ಲಿ ಸುದ್ದಿ ಪ್ರಸಾರವಾದಾಗ ವಿಚಲಿತನಾದೇ ಕೂಡಲೇ ಮಗಳಿಗೆ ದೂರವಾಣಿ ಮೂಲಕ ಜನರ ಸೇವೆಗೆ ಮುಂದಾಗುವಂತೆ ತಿಳಿಸಿದೆ.
ಪ್ರತಿ ಕ್ಷಣದಲ್ಲೂ ಹಗಲಿರುಳು ಜನರ ರಕ್ಷಣೆ
ಈ ಕ್ಷಣದಲ್ಲೂ ಪುತ್ರಿ ಆರ್.ಮೇಘಶ್ರೀ ಕಳೆದ ಸುಮಾರು ೧೦ ದಿನಗಳಿಂದ ಹಗಲು, ರಾತ್ರಿ ಎನ್ನದೆ ಜನರ ಸೇವೆಯಲ್ಲಿ (Wayanad DC Meghashree) ತೊಡಗಿದ್ದಾಳೆ. ಮೇಘಶ್ರೀರವರ ಸೇವಾ ಕಾರ್ಯದ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕೇವಲ ಕರ್ನಾಟಕವಷ್ಟೇಯಲ್ಲದೆ, ಬೇರೆ, ಬೇರೆಕಡೆಯಿಂದಲೂ ಜನರು ದೂರವಾಣಿ ಮೂಲಕ ಅಭಿನಂದಿಸುತ್ತಿದ್ದಾರೆ.
ಮೇಘಶ್ರೀರವರ ಪತಿ ಡಾ.ವಿಕ್ರಂಸಿಂಹ ಕೃಷಿ (Wayanad DC Meghashree) ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅವರ ಕುಟುಂಬವೂ ಸಹ ಮೇಘಶ್ರೀರವರ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡಿದ್ಧಾರೆ.
ಒಟ್ಟಾರೆ ಆರ್.ಮೇಘಶ್ರೀ ಎಲ್ಲರ ವಿಶ್ವಾಸ, ಪ್ರೀತಿ ಗಳಿಸುವುದರಲ್ಲಿ ಯಶಸ್ವಿಯಾಗಿದ್ಧಾರೆ. ಮನೆಯಲ್ಲಿ ಎರಡು ಪುಟ್ಟ ಹೆಣ್ಣು ಮಕ್ಕಳಿದ್ದರೂ ಸಹ ಅವರ ಆರೈಕೆಯತ್ತ ಸ್ವಲ್ಪ ಗಮನ ನೀಡಿ ಉಳಿದ ಪೂರ್ಣಸಮಯವನ್ನು ಜನರ ಸೇವೆಗೆ ಮುಡಿಪಾಗಿಟ್ಟಿದ್ದಾರೆ.
ಇದನ್ನೂ ಓದಿ: Gambling:ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ | 48700 ರೂ ಹಣ, 14 ಬೈಕ್ ವಶ.
ವಿದ್ಯಾರ್ಥಿನಿಯಾಗಿದ್ದಾಗಲೇ ಆಕೆಗೆ ದೇಶಾಭಿಮಾನ ಹೆಚ್ಚಾಗಿತ್ತು. ಕಂಪ್ಯೂಟರ್ಸೈನ್ಸ್ನಲ್ಲಿ ಬಿಇ ಶಿಕ್ಷಣ ಮುಗಿಸಿದ್ದರೂ ೨೦೧೬ರಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿ ವಯನಾಡು ಜಿಲ್ಲಾಧಿಕಾರಿಯಾಗಿ ಅನೇಕ ಸವಾಲುಗಳ ಮಧ್ಯೆಯೂ ಸಹ (Wayanad DC Meghashree)@ ದೃತಿಗೆಡದೆ ಕಾರ್ಯನಿರ್ವಹಿಸುತ್ತಿರುವುದು ಸಂತಸ ತಂದಿದೆ ಎಂದರು.