Chitradurga News | Nammajana.com | 8-5-2024
ನಮ್ಮಜನ.ಕಾಂ.ಚಳ್ಳಕೆರೆ: ತಾಲ್ಲೂಕಿನಾದ್ಯಂತ ಕೆಲವು ಭಾಗಗಳಲ್ಲಿ ಮಾತ್ರ ಬಿರುಗಾಳಿ, ಸಿಡಿಲಿನಿಂದ ಕೂಡಿದ ಮಳೆಗೆ ಬೆಳೆ ಹಾನಿ ಹೆಚ್ಚಾಗಿ ಹಲವಾರು ರೈತರ ಫಸಲಿಗೆ ಬಂದಿದ್ದ ಬೆಳೆಗಳು ನೆಲಕಚ್ಚಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ವಿಶೇಷವಾಗಿ ಪರಶುರಾಮಪುರ ಮತ್ತು ದೇವರ ಮರಿಕುಂಟೆ ಸುತ್ತಮುತ್ತಲ ಪ್ರದೇಶದಲ್ಲಿ ಒಟ್ಟು 54.04 ಎಂ.ಎಂ. ಮಳೆಯಾಗಿದ್ದು, ಸಿಡಿಲು, ಗಾಳಿಗೆ ಬಹುತೇಕ ತೋಟದಲ್ಲಿದ್ದ ಬೆಳೆಗಳು ಸಂಪೂರ್ಣ ನಾಶವಾಗಿವೆ.
ಮಂಗಳವಾರ ರಾತ್ರಿ ಬಿದ್ದ ಮಳೆಗೆ ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರ ಗ್ರಾಮದ ರಾಜಣ್ಣ ಎಂಬುವವರ ರಿ.ರ‍್ವೆ ನಂ. ೬೨/೬ರಲ್ಲಿ ನಾಲ್ಕು ಎಕರೆ ಪ್ರದೇಶದ ರೇಷ್ಮೆ ಗೂಡಿ ಗಾಳಿ ಮಳೆಗೆ ರೇಷ್ಮೆಗೂಡಿನ ಶೆಡ್ ಸಂಪೂರ್ಣ ನೆಲಕಚ್ಚಿ ಸುಮಾರು ೫ ಲಕ್ಷ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಚನ್ನಮ್ಮನಾಗತಿಹಳ್ಳಿ ಕಾವಲಿನಲ್ಲಿ ಭೂಲಿಂಗಪ್ಪ ಎಂಬುವವ ರಿ.ರ‍್ವೆ ನಂ೧೧೫ರ ನಾಲ್ಕು ಎಕರೆ ಬಾಳೆ ತೋಟ ಗಾಳಿಗೆ ಸಿಕ್ಕು ಸಂಪೂರ್ಣ ನೆಲಕುರುಳಿ ೨ ಲಕ್ಷ ನಷ್ಟ ಸಂಭವಿಸಿದೆ. ದಾರ‍್ಲಹಳ್ಳಿಯ ಶಾಂತಮ್ಮ, ಓಬಳಾಪುರ ಗ್ರಾಮದ ರೇಣುಕಮ್ಮ, ಶಾಂತಮ್ಮ ಎಂಬುವವರ ಮನೆಗಳ ಸೀಟು ಹಾರಿಹೋಗಿ, ಗೋಡೆ ಕುಸಿದು ಒಟ್ಟು ೧.೨೦ ಲಕ್ಷ ನಷ್ಟ ಸಂಭವಿಸಿದೆ.
ಇದನ್ನೂ ಓದಿ :ಚಿತ್ರದುರ್ಗ| ಬೆಳೆಹಾನಿ ಪರಿಹಾರದ ಮಾಹಿತಿಗೆ ಸಹಾಯವಾಣಿ ಆರಂಭ
ಕಾಟಂದೇವರಕೋಟೆಯಲ್ಲಿ ರಾಜಪ್ಪ ಎಂಬುವವರ ರಿ.ರ‍್ವೆ ನಂ. ೯೮/೩ರಲ್ಲಿ ಮೂರು ಎಕರೆ ಮೆಕ್ಕೆಜೋಳ ನೆಲಕಚ್ಚಿ ೮೦ ಸಾವಿರ ನಷ್ಟ ಸಂಭವಿಸಿದೆ, ಓ.ಪಾಲಮ್ಮ ರಿರ‍್ವೆ ನಂ ೫೨/೪ರ ಎರಡು ಎಕರೆ ಪಪ್ಪಾಯ ಗಾಳಿಗೆ ಬಿದ್ದು ೬೦ ಸಾವಿರ ನಷ್ಟ ಸಂಭವಿಸಿದೆ. ಓ.ಶಿವಣ್ಣ ಎಂಬುವವರ ರಿ.ರ‍್ವೆ ನಂ.೧೦೩/೦೩ರ ಮೂರು ಎಕರೆ ಪ್ರದೇಶದ ಪಪ್ಪಾಯ ನೆಲಕಚ್ಚಿ ೮೦ ಸಾವಿರ ನಷ್ಟ ಸಂಭವಿಸಿದೆ. ಶ್ರೀನಿವಾಸ್ ಎಂಬುವವರ ೧೦೩/೧೩ರ ಜಮೀನಿನಲ್ಲಿದ್ದ ದಾಳಿಂಬೆ ನಾಶವಾಗಿ ೮೦ ಸಾವಿರ ನಷ್ಟ ಸಂಭವಿಸಿದೆ.
ಸಿ.ಟಿ.ಅಶ್ವತರೆಡ್ಡಿ ರಿ.ರ‍್ವೆ ನಂ ೧೫/೧ಡಿಯಲ್ಲಿದ್ದ ಅಡಿಕೆ ಮತ್ತು ಬಾಳೆ ಬೆಳೆ ನೆಲಕಚ್ಚಿ ೧.೫೦ ಲಕ್ಷ ನಷ್ಟವಾಗಿದೆ.
ಓಬಳಾಪುರ ಗ್ರಾಮದ ನರಸಿಂಹಪ್ಪ ಎಂಬುವವರ ರಿ.ರ‍್ವೆ ನಂ ೮೩/೭ರ ಜಮೀನಿನಲ್ಲಿದ್ದ ಮೆಕ್ಕೆಜೋಳ ನೆಲಕಚ್ಚಿ ೨೦ಸಾವಿರನಷ್ಟ ಸಂಭವಿಸಿದೆ, ತಿಮ್ಮಪ್ಪ ಎಂಬುವವರ ರಿ.ರ‍್ವೆ ನಂ ೮೪/೨ರ ಮೂರು ಎಕರೆ ಪ್ರದೇಶದ ಮೆಕ್ಕೆಜೋಳ ಗಾಳಿಗೆ ಮುರಿದು ೯೦ ಸಾವಿರ ನಷ್ಟವಾಗಿದೆ.
ಲಿಂಗರಾಜು ಎಂಬುವವರ ೮೪/೨ರ ೫ ಎಕರೆ ಪ್ರದೇಶದ ಮೆಕ್ಕೆಜೋಳ ಮಳೆಗೆ ಸಿಲುಕಿ ೧.೫೦ ಲಕ್ಷ ನಷ್ಟವಾಗಿದೆ. ಜಿ.ಎಲ್.ಗವಿಸಿದ್ದಪ್ಪ ಎಂಬುವವರ ರಿ.ರ‍್ವೆ ನಂ ೨೨/೨ರಲ್ಲಿದ್ದ ೪೧ ಅಡಿಕೆ ಗಿಡ ನಾಶವಾಗಿದೆ.
ಮಂಜುನಾಥ ೩೦ ಅಡಿಗೆ ಗಿಡಗಳು ಮುರಿದು ೪೦ ಸಾವಿರ ನಷ್ಟ ಸಂಭವಿಸಿದೆ. ವಿ.ಹನುಮಪ್ಪ ರಿರ‍್ವೆ ನಂ ೧೩೧/೧೩ರ ೧.೨೬ ಎಕರೆ ಪ್ರದೇಶದ ಬಾಳೆ ನೆಲಕಚ್ಚಿ ೧.೫೦ಲಕ್ಷ ನಷ್ಟ ಸಂಭವಿಸಿದೆ. ವೆಂಕಟೇಶ್ ಎಂಬುವವರ ೧೩೧/೧ರ ಬಾಳೆ ನೆಲಕಚ್ಚಿ ೧.೫೦ ಸಂಪೂರ್ಣ ನಷ್ಟವಾಗಿದೆ.