Chitradurga news|nammajana.com|10-05-2025
ನಮ್ಮ ಜನ.ಕಾಂ, ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರುವನೂರು ಗ್ರಾಮದ ಪೊಲೀಸ್ ಠಾಣೆಯ ಪಕ್ಕದ ಸುಮಾರು 5 ಎಕರೆ ಜಮೀನಿನಲ್ಲಿ ಬೆಂಗಳೂರಿನ (World Record) ಶ್ರೀಸಾಯಿಕ್ಯಾಡ್ ಸಂಸ್ಥೆ ಶ್ರೀಆಂಜನೇಯಸ್ವಾಮಿಯ ರೇಖಾಚಿತ್ರವನ್ನು ರಚಿಸಿದ್ದು ಸದರಿ ರೇಖಾಚಿತ್ರ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾಗಿದ್ದು ಸಾಯಿ ಕ್ಯಾಡ್ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ರಾಜ್ಯ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಶಾಸಕ ಟಿ.ರಘುಮೂರ್ತಿಯವರನ್ನು ಮುಖ್ಯಮಂತ್ರಿಗಳ ನಿವಾಸದಲ್ಲಿ ಅಭಿನಂದಿಸಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶ್ರೀಸಾಯಿಕ್ಯಾಡ್ ಸಂಸ್ಥೆ ತುರುವನೂರಿನ ಐದು ಎಕರೆ ಪ್ರದೇಶದಲ್ಲಿ ಆಂಜನೇಯಸ್ವಾಮಿಯ ರೇಖಾಚಿತ್ರವನ್ನುಬಿಡಿಸಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾಗಿದ್ದೀರಿ, ಗ್ರಾಮೀಣ ಭಾಗದಲ್ಲಿ ಇಂತಹ (World Record) ಸಾಧನೆಗಳನ್ನು ಗುರುತಿಸುವುದು ಅಪರೂಪವಾದ ಕಾಲದಲ್ಲಿ ಸಂಸ್ಥೆ ಮಾಡಿರುವ ಕಾರ್ಯ ಶ್ಲಾಘನೀಯವೆಂದರು.
ಅಭಿ ನಿದನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ, ನಮ್ಮ ಜಿಲ್ಲೆಯಲ್ಲಿ ಶಾಸಕ ರಘುಮೂರ್ತಿ ಕ್ಷೇತ್ರದಲ್ಲಿ ಇಂತಹ ಮಹಾನ್ ಸಾಧನೆ ಮಾಡಿದ ಸಾಯಿಕ್ಯಾಡ್ ಸಂಸ್ಥೆ ಕಾರ್ಯದಿಂದ ರಾಜ್ಯಕ್ಕೂ ಜಿಲ್ಲೆಗೂ ಕೀರ್ತಿ ತಂದಿದ್ದೀರಿರೆಂದು ಅಭಿನಂದಿಸಿದರು.

ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ, ತುರುವನೂರಿನ ರೇಖಾ ಚಿತ್ರ ಸಾಯಿಕ್ಯಾಡ್ ಸಂಸ್ಥೆಯ ಸಂಸ್ಥಾಪಕ ಮಂಜುನಾಥರೆಡ್ಡಿ, ಪತ್ನಿಪ್ರತಿಮಾರೆಡ್ಡಿ ಹಾಗೂ ತಂಡ ಈ ಕಾರ್ಯವನ್ನು (World Record) ಅಚ್ಚುಕಟ್ಟಾಗಿ ನೆರವೇರಿಸುವ ಮೂಲಕ ನೂತನ ದಾಖಲೆಯನ್ನು ನಿರೂಪಿಸಿದ್ಧಾರೆ.
ಇದನ್ನೂ ಓದಿ: SSLC Result | ಚಳ್ಳಕೆರೆ ತಾಲೂಕಿನಲ್ಲಿ ಇಂಧಿರಗಾಂಧಿ ವಸತಿ ಶಾಲೆ ನಂಬರ್ ಒನ್
ನಿಮ್ಮ ಸಾಧನೆ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಗೆ ದಾಖಲಾಗಿರುವುದು ಸಂತಸ ತಂದಿದೆ. ನಿಮ್ಮ (World Record) ಕಾರ್ಯಕ್ಕೆಆಂಜನೇಯಸ್ವಾಮಿ ಯಫಲ ದೊರಕಿದೆ. ನಿಮ್ಮ ಕಾರ್ಯದಿಂದ ನಮ್ಮ ಕ್ಷೇತ್ರಕ್ಕೂ ಹಾಗೂ ಜಿಲ್ಲೆಗೂ ಉತ್ತಮ ಗೌರವ ವ್ಯಕ್ತವಾಗಿದೆ ಎಂದರು.
ಇದನ್ನೂ ಓದಿ: CHITRADURGA ನಗರಸಭೆ: ಮೇ.10 ರಿಂದ 12 ರವರೆಗೆ ಬಿ ಖಾತಾ ಅಭಿಯಾನ
ಇದನ್ನೂ ಓದಿ: Lecturer post | ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252