Chitradurga News | Nammajana.com | 01-09-2025
ನಮ್ಮಜನ ನ್ಯೂಸ್ ಕಾಂ,ಚಳ್ಳಕೆರೆ: ತಾಲೂಕಿನ(suicide) ದೇವರಮರಿಕುಂಟೆ ಗ್ರಾಮದಲ್ಲಿ ಸೃಷ್ಟಿ (17) ಬಾಲಕಿ ಹೊಟ್ಟೆನೋವಿನಿಂದ ನರಳುತ್ತಿದ್ದು, ಹೊಟ್ಟೆನೋವು ವಾಸಿಯಾಗದ ಕಾರಣ ತನ್ನ ಮನೆಯಲ್ಲೇ ನೇಣುಹಾಕಿಕೊಂಡು ಮೃತಪಟ್ಟಿದ್ದಾಳೆ.

ಇದನ್ನೂ ಓದಿ: Pratibha Puraskara: ಅಧಿಕಾರ, ಉನ್ನತ ಹುದ್ದೆಗಳು ಸಿಕ್ಕಾಗ ಕೈ ಹಿಡಿದು ನಡೆಸಿದವರನ್ನು ಮರೆಯಬಾರದು: ಟಿ.ರಘುಮೂರ್ತಿ
ಮೃತಳ ತಂದೆ ಕರಿಯಪ್ಪ ಈ ಬಗ್ಗೆ ದೂರು ನೀಡಿ ನನ್ನ ಮಗಳು ಸೃಷ್ಟಿಗೆ ಕಳೆದ ಆರು ತಿಂಗಳಿಂದ ಹೊಟ್ಟೆನೋವಿದ್ದು ವಿವಿಧ ವೈದ್ಯರಲ್ಲಿ ತೋರಿಸಿದರು ವಾಸಿಯಾಗಲಿಲ್ಲ, ಇದರಿಂದ ನೊಂದ ಆಕೆ ಮನೆಯಲ್ಲಿ ನೇಣುಹಾಕಿಕೊಂಡು ಮೃತಪಟ್ಟಿದ್ದಾಳೆ. ಠಾಣಾಧಿಕಾರಿ ಬಿ.ಎಂ.ಗಂಗಾಧರ ಯು.ಡಿ.ಆರ್‌ಪ್ರಕರಣ ದಾಖಲಿಸಿದ್ದಾರೆ.
