Chitradurga news|Nammajana.com|8-8-2025
ನಮ್ಮಜನ.ಕಾ, ಮೊಳಕಾಲ್ಮುರು: ತಾಲೂಕಿನ ವಿವಿಧ ಗ್ರಾಮಗಳಿಗೆ ಗುರುವಾರ ಜಿಪಂ ಸಿಇಒ ಡಾ.ಎಸ್.ಆಕಾಶ್ ಭೇಟಿ ನೀಡಿ ಜಲ (Zp ceo) ಜೀವನ ಮಿಷನ್ ಹಾಗೂ ಉದ್ಯೋಗ ಖಾತ್ರಿ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಆರಂಭದಲ್ಲಿ ಬೊಮ್ಮದೇವರಹಳ್ಳಿ, ಮುರುಡಿ, ವೀರಾಪುರಕಾಡುಸಿದ್ದಾಪುರ, ನಾಗಸಮುದ್ರ ಗ್ರಾಮಗಳಲ್ಲಿ ನಡೆಯು ತ್ತಿದ್ದ ಜಲಜೀವನ್ ಮಿಷನ್ ಯೋಜನೆಯ (Zp ceo) ಕಾಮಗಾರಿಗಳ ಸ್ಥಳ ಪರಿಶೀಲಿಸ ಲಾಯಿತು.
ಈ ಗ್ರಾಮಗಳ ಪೈಕಿ ವೀರಾ ಪುರ ಹಾಗೂ ಕಾಡುಸಿದ್ದಾಪುರ ಗ್ರಾಮ ಗಳಲ್ಲಿ ಜೆಜೆಎಂ ಯೋಜನೆಯ ನೀರು ಸರಬರಾಜಾಗುತ್ತಿದ್ದು, ಈ ಸಂಬಂಧ ಸ್ಥಳೀಯರ ಜತೆ ಚರ್ಚೆ ನಡೆಸಿ ನೀರಿನ ಬಳಕೆ, ಸರಬರಾಜಾಗುತ್ತಿರುವ ನೀರಿನ ಪ್ರಮಾಣ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿ ಕೇಳಿ ಪಡೆದು ಕೊಂಡರು.
ಈ ಗ್ರಾಮಗಳ ವ್ಯಾಪ್ತಿಯಲ್ಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸ್ಥಳಕ್ಕೂ ಭೇಟಿ ನೀಡಿ ಕೂಲಿ ಕಾರ್ಮಿಕರ ಜತೆ ಸಂವಾದ ನಡೆಸಿದರು.
ಜಿ.ಪಂ. ಸಿಇಒ ಡಾ.ಎಸ್.ಆಕಾಶ್ ಎಲ್ಲೆಲ್ಲಿ ಭೇಟಿ ಕೊಟ್ಟಿದ್ದರು
ಸರ್ಕಾರಿ ಶಾಲೆಗಳು,ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಇಲ್ಲಿನ ಮಕ್ಕಳಿಗೆ ನೀಡುತ್ತಿರುವ ಪೋಷಣ್ ಅಭಿಯಾನ (Zp ceo) ಯೋಜನೆಯಡಿ ಮೊಟ್ಟೆ, ಬಾಳೆಹಣ್ಣುಗಳ ವಿತರಣೆ ಹಾಗೂ ಬಿಸಿಯೂಟದ ಗುಣಮಟ್ಟದ ಬಗ್ಗೆಯೂ ಸ್ಥಳೀಯರಿಂದ ಮಾಹಿತಿ ಪಡೆದರು.
ರಾಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಈ ಆಸ್ಪತ್ರೆಯ ವೈದ್ಯರು, ಸಿಬ್ಬಂಧಿಗಳ ಮಾಹಿತಿ, ಪ್ರತಿ ತಿಂಗಳು ಇಲ್ಲಿ ನಡೆಯುವ ಹೆರಿಗೆಗಳ ಪ್ರಮಾಣ ವಿಚಾರಿಸಿದಾಗ ಇಲ್ಲಿನ ಸಿಬ್ಬಂಧಿ ಪಟ್ಟಣದ ಆಸ್ಪತ್ರೆ ಗಿಂತ ಈ ಆಸ್ಪತ್ರೆಯಲ್ಲಿ ಹೆರಿಗೆ ಹೆಚ್ಚಾಗುತ್ತವೆ. ಕಳೆದ ತಿಂಗಳು 30 ಹೆರಿಗೆ ಮಾಡಿಸಲಾಗಿದೆ. ಈ ತಿಂಗಳಲ್ಲಿ ಈಗಾಗಲೇ 14 ಜನರಿಗೆ ಹೆರಿಗೆ ಮಾಡಿಸಿದ್ದೇವೆ ಎಂದುಮಾಹಿತಿ ನೀಡಿದರು.
ಕೂಸಿನ ಮನೆಗೆ ತೆರಳಿ ಸಿಇಒ ಪರಿಶೀಲನೆ
ರಾಂಪುರದಲ್ಲಿ ನಿರ್ಮಿಸಿದ ಕೂಸಿನ ಮನೆಗೆ ತೆರಳಿ ಪರಿಶೀಲನೆ ನಡೆಸಲಾಯಿತು. ಹಾನಗಲ್ ಗ್ರಾಪಂ ವ್ಯಾಪ್ತಿಯಕೆರೆ ಊಳೆತ್ತುವ ಸ್ಥಳ ಹಾಗೂ ತಮ್ಮೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ (Zp ceo) ಖಾತ್ರಿ ಯೋಜನೆಯಯ ಕಾಮಗಾರಿ ಸ್ಥಳಕ್ಕೂ ಭೇಟಿ ನೀಡಲಾಯಿತು.
ಇದನ್ನೂ ಓದಿ: Challakere | ವಿದ್ಯುತ್ ಶಾಕ್, ನವಿಲು ಸಾವು
ಸ್ಥಳದಲ್ಲಿ ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಿ.ಆರ್.ಮಧು, ಜಿಪಂ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ತಾಪಂ ಇಒ ಎಚ್.ಹನುಮಂತಪ್ಪ, ಜಿಪಂ ಉಪ ಎಂಜಿನಿಯರಿಂಗ್ ವಿಭಾಗದ ಎಐಐ ಲಿಂಗರಾಜ್, ತಾಪಂ ವ್ಯವಸ್ಥಾಪಕ ಗಣೇಶ್, ಮಂಜುನಾಥ್ ಹಾಗೂ ಅಧಿಕಾರಿಗಳು ಇದ್ದರು.
